ಶ್ರೀಬಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರಡಿ ಹೊಳ್ಮಗೆ ವಾರ್ಷಿಕ ಗೆಂಡಸೇವೆ
ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರಡಿ ದೇವಸ್ಥಾನದಲ್ಲಿ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ವಿಜೃಂಭಣೆಯಿಂದ ನಡೆಯಿತು.
ವರ್ಷಂಪ್ರತಿ ನಡೆಯುವ ಶ್ರೀ ದೇವರ ವಾರ್ಷಿಕ ಗೆಂಡಸೇವೆ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಮತ್ತು ಹಣ್ಣುಕಾಯಿ ಸೇವೆ ಹಾಗೂ ಶುಕ್ರವಾರ ತುಲಾಭಾರ ಸೇವೆ,ದೈವದರ್ಶನ ಸೇವೆ,ಹರಕೆ ಕೋಲ ಜರುಗಿತು. ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕಷ್ಟ ಕಾಲದಲ್ಲಿ ಹೇಳಿ ಕೊಂಡ ಹರಕೆಯನ್ನು ಸಲ್ಲಿಸಿದರು.
ವಾರ್ಷಿಕ ಹಬ್ಬದ ಅಂಗವಾಗಿ ದೈವಸ್ಥಾನವನ್ನು ಹೂವಿನ ಅಲಂಕಾರ ಮತ್ತು ದೀಪಾಲಂಕಾರದಿಂದ ಶೃಂಗಾರಿಸಲಾಯಿತು.ಬಂಟರಗರಡಿ,ಹೋರ್ ಬೊಬ್ಬರ್ಯ ಹಾಗೂ ನೆತ್ರ ಹಾೈಗುಳಿ ದೈವಸ್ಥಾನದ ದೈವಗಳು ಜತೆಯಾಗಿ ಕೊಡಿ ನೀರಿಗೆ ಅರ್ಚಕರ ಮನೆಗೆ ಹೊಗುವುದು ವಿಶೇಷವಾಗಿದೆ.ಚಂಡೆ ಡೋಲು ವಾದ್ಯ ಘೋಷದೊಂದಿಗೆ ದೈವವನ್ನು ಮೆರವಣಿಗೆ ಮೂಲಕ ಕೊಡಿ ನೀರಿಗೆ ಭಕ್ತ ಸಮೂಹವೂ ಬರಮಾಡಿ ಕೊಳ್ಳುತ್ತಾರೆ ಎಂದರು.
ಶ್ರೀಬಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರಡಿ ಹೊಳ್ಮಗೆ ಕಾರ್ಯದರ್ಶಿಯಾದ ಚಂದ್ರಹಾಸ ಮಾತನಾಡಿ,400 ವರ್ಷಗಳ ಕಾಲ ಇತಿಹಾಸವನ್ನು ಹೊಂದಿರುವ ದೈವಸ್ಥಾನವೂ ಬಹಳಷ್ಟು ಪುರಾತನ ದೈವಸ್ಥಾನಗಳಲ್ಲಿ ಒಂದಾಗಿದೆ.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಂತಹ 66 ಗರಡಿಯಲ್ಲಿ ಇದು ಸಹ ಒಂದು ಗರಡಿ ಆಗಿದೆ ಎಂದು ಹೇಳಿದರು.
ತುಂಬಾ ಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಇತ್ತಿಚಿಗೆ ಪುನರ್ ನಿರ್ಮಾಣ ಮಾಡಲಾಗಿದೆ ಎಂದರು.ಬಂಟರಗರಡಿ,ಹೋರ್ ಬೊಬ್ಬರ್ಯ,ನೆತ್ರ ಹಾೈಗುಳಿ ದೈವಸ್ಥಾನದ ಹಬ್ಬ ಒಟ್ಟಿಗೆ ನಡೆಯುವುದು ಬಹಳ ವಿಶೇಷವಾಗಿದೆ ಎಂದರು.ಪ್ರತಿ ಸಂಕ್ರಾತಿ ದಿನದಂದು ವಿಶೇಷ ಪೂಜೆ ಜರುತ್ತದೆ ಎಂದರು.
ದೈವಸ್ಥಾನದ ಗೌರವಾಧ್ಯಕ್ಷರಾದ ಕೆ.ಸೂರ ಮೊಗವೀರ ಅವರು ಮಾತನಾಡಿ,ದೈವ ಸನ್ನಿಧಾನದಲ್ಲಿ ವಾರ್ಷಿಕ ಗೆಂಡ ಸೇವೆ ಜತೆಗೆ ಹಾಲುಹಬ್ಬ ಕೂಡ ವಿಶೇಷವಾದ ರೀತಿಯಲ್ಲಿ ನಡೆಯುತ್ತಿದೆ.ದೈವವನ್ನು ನಂಬಿದ ಕುಟುಂಸ್ಥರು ಉತ್ತರೋತ್ತರವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಪಂಜುರ್ಲಿ ದೈವದ ಕಾರಣಿಕ ಶಕ್ತಿಗೆ ಸಾಕ್ಷಿಭೂತವಾಗಿದೆ.ಪಂಜುರ್ಲಿ ಮಾತಾಡಿ ಹಾಳು ಮಾಡುವುದಿಲ್ಲ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ.ದೈವಸ್ಥಾವನ್ನು ಅಭಿವೃದ್ಧಿಗೊಳಿಸಲು ಹೊದಂತಹ ಸಂದರ್ಭದಲ್ಲಿ ದೈವವೇ ಮುಂದೆ ನಿಂತು ಎಲ್ಲಾ ಕೆಲಸವನ್ನು ಮಾಡಿಸಿಕೊಂಡಿದೆ ಎಂದು ಕ್ಷೇತ್ರದ ಮಹಿಮೆ ಬಗ್ಗೆ ವಿವರಿಸಿದರು.
ದೈವಸ್ಥಾನದ ಪಾತ್ರಿಗಳಾದ ಶಂಕರ ಪೂಜಾರಿ ಮಾತನಾಡಿ,ಮೂರು ದೈವಸ್ಥಾನಗಳ ಸಮಿತಿ ಒಳ್ಳೆ ರೀತಿ ಕೂಡುವಿಕೆ ಯಿಂದ ನಡೆದುಕೊಂಡು ಹೋಗುತ್ತಿದೆ.ಬಂಟರ ಗರಡಿ ದೈವಸ್ಥಾನದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಬೇಕ್ಕೆನ್ನುವ ಆಶೆಯನ್ನು ಹೊಂದಿದ್ದು ಭಕ್ತರು ನಮ್ಮ ಜತೆ ಕೈ ಜೋಡಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಹೊಳ್ಮಗೆ,ಅರ್ಚಕರಾದ ಸಂಜೀವ ಪೂಜಾರಿ,ಸದಸ್ಯರಾದ ಸತೀಶ ಪೂಜಾರಿ ಕುಂದಬಾರಂದಾಡಿ,ಭಾಸ್ಕರ ಪೂಜಾರಿ,ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ:ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-:9916284048