ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ಗೋಳಿಹೊಳೆ-ಸೌಹಾರ್ದ ಸಹಕಾರಿ ದಿನಾಚರಣೆ
ಬೈಂದೂರು:ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು-ಗೋಳಿಹೊಳೆ ವತಿಯಿಂದ ಸೌಹಾರ್ದ ಸಹಕಾರಿ ದಿನಾಚರಣೆ, ಗ್ರಾಹಕರ ಸಭೆ ಮಹಿಷಮರ್ಧಿನಿ ಸಭಾಭವನ ಗೋಳಿಹೊಳೆಯಲ್ಲಿ ಅದ್ದೂರಿಯಾಗಿ ಸೋಮವಾರ ನಡೆಯಿತು.
ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.
ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕರಾದ ಎಸ್.ಕೆ ಮಂಜುನಾಥ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಕಾಡಂಚಿನ ಪ್ರದೇಶವನ್ನು ಹೊಂದಿರುವ ಗೋಳಿಹೊಳೆ ಅಂತಹ ಪ್ರದೇಶದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ಆಯೋಜನೆ ಮಾಡಿರುವುದು ಸಂಘದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಆಗಿದೆ.ಸರಕಾರದ ಯಾವುದೇ ರೀತಿಯ ಅನುದಾನ ಮತ್ತು ಪ್ರೋತ್ಸಾಹವಿಲ್ಲದೆ ಸಂಘದ ಸದಸ್ಯರಿಲ್ಲದೆ ಇಂದು ಸೌಹಾರ್ದ ಸಹಕಾರಿ ಸಂಸ್ಥೆಗಳು ಪ್ರಗತಿಯನ್ನು ಸಾಧಿಸಿದೆ ಎಂದರು.ಸರಕಾರ ವಿಧಿಸಿದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿದ ಅನಿವಾರ್ಯಯತೆ ನಮಗೆ ಇದೆ ರಾಜಕೀಯ ಉದ್ದೇಶದಿಂದಾಗಿ ಒಳ್ಳೆ ಸಹಕಾರಿ ಸಂಸ್ಥೆಗಳು ಮೂಲೆ ಗುಂಪಾಗಿದೆ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಶ್ರೀರಾಮ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಬೈಂದೂರು ಅಧ್ಯಕ್ಷ ಎಸ್.ರಾಜು ಪೂಜಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಸಣ್ಣ ಠೇವಣಿ ಯೊಂದಿಗೆ ಆರಂಭಗೊಂಡ ಗೋಳಿಹೊಳೆ ಶಾಖೆ ಇಂದು ತನ್ನ ಸ್ವಂತ ನೆಲೆಯಲ್ಲಿ ಗ್ರಾಹಕರಿಗೆ ಸಾಲವನ್ನು ವಿತರಿಸುತ್ತಿದೆ.ಸಂಸ್ಥೆಯ ಯಶಸ್ಸಿಗೆ ಗ್ರಾಹಕರ ಕೊಡುಗೆ ಅಪಾರವಾದದ್ದು ಎಂದರು. ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವ ನಮ್ಮ ಸಂಸ್ಥೆಯೂ ಸಂಘದ ಸದಸ್ಯರಲ್ಲಿರುಲವ ಪ್ರತಿಭೆಯನ್ನು ಹೊರ ಹಾಕುವ ದೃಷ್ಟಿಯಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಗೋಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಶೆಟ್ಟಿ ಮಾತನಾಡಿ,ತೀರಾ ಹಿಂದುಳಿದ ಪ್ರದೇಶದಲ್ಲಿ ಸೌಹಾರ್ದ ಸೊಸೈಟಿಯನ್ನು ಹುಟ್ಟು ಹಾಕುವುದರ ಮೂಲಕ ರಾಜು ಪೂಜಾರಿ ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿಗೆ ಉತ್ತೇಜನ ನೀಡುವುದರ ಮೂಲಕ ವಿಶೇಷವಾದ ರೀತಿಯಲ್ಲಿ ಕೊಡುಗೆಯನ್ನು ನೀಡಿದರು ಎಂದು ಸ್ಮರಿಸಿದರು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಸೌಹಾರ್ದ ಸಂಯೋಜಕರಾದ ವಿಜಯ ಬಿ.ಎಸ್, ನಿವೃತ್ತ ಮುಖ್ಯೋಪಾಧ್ಯಾಯ ಜೆ.ರತ್ನಾಕರ ಶೆಟ್ಟಿ,ಉಪಾಧ್ಯಕ್ಷ ವಿನಾಯಕ ರಾವ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಕಿಟ್ಟಣ್ಣ ರೈ,ಶಾಖಾ ವ್ಯವಸ್ಥಾಪಕ ರಾಘವೇಂದ್ರ ಪೂಜಾರಿ,ನಿರ್ದೇಶಕ ಸಿದ್ದ ಮಡಿವಾಳ,ರೋಹಿತ್ ಉಪಸ್ಥಿತರಿದ್ದರು.
ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಯಡ್ತರೆ ಅಧ್ಯಕ್ಷ ಟಿ.ನಾರಾಯಣ ಹೆಗಡೆ ಮತ್ತು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ಶಾಖಾ ಸಲಹಾ ಸಮಿತಿ ಸದಸ್ಯ ನಾರಾಯಣ ಶೆಟ್ಟಿ ಚುಚ್ಚಿ ಅವರನ್ನು ಸನ್ಮಾನಿಸಲಾಯಿತು.
ಶ್ರೇಯ ಮತ್ತು ತಂಡದವರು ಪ್ರಾರ್ಥಿಸಿದರು.ಸಂಘದ ಅಧ್ಯಕ್ಷ ರಾಜು ಎಸ್ ಪೂಜಾರಿ ಸ್ವಾಗತಿಸಿದರು.ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.ವಿನಾಯಕ ರಾವ್ ಸನ್ಮಾನ ಪತ್ರ ವಾಚಿಸಿದರು.ವ್ಯವಸ್ಥಾಪಕ ರಾಘವೇಂದ್ರ ಪೂಜಾರಿ ವಂದಿಸಿದರು.
ಸಂಘದ ಸದಸ್ಯರಿಗೆ ನೀಡಿದ ಲಕ್ಕಿ ಕೂಪನ್ ಡ್ರಾದಲ್ಲಿ ವಿಜೇತರಾದವರಿಗೆ ವಿಶೇಷ ಬಹುಮಾನ ವಿತರಿಸಲಾಯಿತು.