ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್,ನವ ಭಾರತ್ ಟಿಂಬರ್ಸ್ ಕುಂದಾಪುರದಲ್ಲಿ ಶುಭಾರಂಭ
ಕುಂದಾಪುರ:ತಾಲೂಕಿನ ಸಂಗಮ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್,ನವಭಾರತ್ ಟಿಂಬರ್ಸ್ ಅದರ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.
ಕಳೆದ ಎಂಟು ವರ್ಷಗಳಿಂದ ಆಫ್ರಿಕಾ ದೇಶದಲ್ಲಿ ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಮರದ ಉದ್ಯಮವನ್ನು ಮಾಡುತ್ತಿರುವ ಅಪೇಕ್ಸ್ ಸಂಸ್ಥೆ ಬಹಳಷ್ಟು ಅನುಭವವನ್ನು ಹೊಂದಿದೆ.ಅದರ ಸಹ ಸಂಸ್ಥೆಯಾದ ನವಭಾರತ್ ಟಿಂಬರ್ಸ್ ಕುಂದಾಪುರದಲ್ಲಿ ಆರಂಭಗೊಂಡಿದೆ. ಕಟ್ಟಡ,ದೇವಸ್ಥಾನ,ಫರ್ನಿಚರ್,ಇಂಟೀರಿಯರ್‍ಗೆ ಬೇಕಾಗುವ ಎಲ್ಲಾ ರೀತಿಯ ಗುಣಮಟ್ಟದ ರೆಡಿ ಸೈಜ್,ಕಟ್ ಸೈಜ್ ಮರಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ.ಇಲ್ಲಿ ಇಂಪಾರ್ಟೆಂಟ್ ಟಿಕ್ಸ್,ಸಾಗುವಾನಿ,ಕಲ್ಲಂಬೋಗಿ,ಅಕೇಶೀಯಾ,ಬೋಗಿ,ಹಲಸು,ಹುಣಾಲ್,
ಮಹಾಗನಿ,ಹೆಬ್ಬೆಲಸು ನಂತಹ ಉತ್ತಮ ದರ್ಜೆಯ ಮರಗಳು ದೊರೆಯಲ್ಲಿದೆ.
ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್ ನವಭಾರತ್ ಟಿಂಬರ್ಸ್ ಪಾಲುದಾರರಾದ ಪೂರ್ಣಚಂದ್ರ ದೇವಾಡಿಗ ಮಾತನಾಡಿ,ಕರಾವಳಿ ತೀರದ ವಾತಾವರಣಕ್ಕೆ ಒಗ್ಗಿ ಕೊಳ್ಳುವಂತಹ ಊರಿನ ಮರಗಳು ಸಹಿತ ಉತ್ತಮ ಗುಣ ಮಟ್ಟವನ್ನು ಹೊಂದಿರುವ ಇಂಪಾರ್ಟೆಂಟ್ ಟಿಕ್ಸ್ ರೀಯಾತಿ ದರದಲ್ಲಿ ದೊರೆಯುತ್ತದೆ.ಉತ್ತಮ ರೀತಿಯ ರೆಡಿ ಸೈಜ್ ಮರಗಳನ್ನು ಖರೀದಿಸಲು ನಮ್ಮ ಸಂಸ್ಥೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭೇಟಿ ನೀಡಿ ನವ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಆಸೀಫ್ ಅನ್ವರ್ ಮಾತನಾಡಿ,ಅಮೇರಿಕಾ,ಆಫ್ರಿಕಾ ದೇಶಗಳ ಇಂಪಾರ್ಟೆಂಟ್ ಸಾಗುವಾನಿ ಮರ ನಮ್ಮಲ್ಲಿ ದೊರೆಯುತ್ತದೆ.ಇಲ್ಲಿನ ಹವಾಗುಣಕ್ಕೆ ಒಗ್ಗಿಕೊಳ್ಳಲಿದೆ,ಯಾವುದೇ ರೀತಿ ಸಮಸ್ಯೆ ಇಲ್ಲಾ ನೂರು ಪರ್ಸೆಂಟ್ ಗ್ಯಾರಂಟಿ ಇದೆ ಎಂದು ಹೇಳಿದರು.ಮರಗಳು ರೆಡಿ ಸೈಜ್‍ನಲ್ಲಿ ದೊರೆಯಲ್ಲಿದ್ದು.ಉತ್ತಮ ರೀತಿಯ ಆಕರ್ಷಣೆ ಮತ್ತು ಗುಣ ಮಟ್ಟವನ್ನು ಹೊಂದಿರಲಿದೆ ಎಂದು ಹೇಳಿದರು.
ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್ ನವಭಾರತ್ ಟಿಂಬರ್ಸ್ ಪಾಲುದಾರರಾದ ಚೇತನ್.ಕೆ ದೇವಾಡಿಗ ಮತ್ತು ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.