ಯೋಗ ತರಬೇತಿ ಸಮಾರೋಪ ಸಮಾರಂಭ

Share

Advertisement
Advertisement

ಕುಂದಾಪುರ:ಜೋಗಿ ಮನೆ ಟ್ರಸ್ಟ್ ಹಳಗೇರಿ ತಂಕಬೆಟ್ಟು ,ಜೆ.ಸಿ.ಐ.ಉಪ್ಪುಂದ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಅವರ ಸಂಯುಕ್ತ ಆಶ್ರಯದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ 10 ದಿನಗಳ ಉಚಿತ ಯೋಗ ತರಬೇತಿಯ ಸಮಾರೋಪ ಸಮಾರಂಭ ಹಳಗೇರಿ ಜೋಗಿ ಮನೆ ವಠಾರದಲ್ಲಿ ನಡೆಯಿತು.
ಸಿದ್ಧಪೀಠ ಕೊಡಾಚಾದ್ರಿ ಪ್ರಧಾನ ಕಾರ್ಯದರ್ಶಿ
ಡಾ.ಕೇಶವ ಕೋಟೇಶ್ವರ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ.ಯೋಗ ತರಬೇತಿ ಶಿಬಿರದಂತಹ ಕಾರ್ಯಕ್ರಮಗಳು ಎಲ್ಲಾ ಪರಿಸರದಲ್ಲಿ ನಡೆಯಬೇಕು.ಸಮಾಜ ಸೇವೆ ಮಾಡುವಂತಹ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳುವುದರಿಂದ ಸಮಾಜ ಸುಧಾರಣೆಯನ್ನು ಮಾಡಬಹುದಾಗಿದೆ ಎಂದು ಹೇಳಿದರು.
ಯೋಗ ತರಬೇತುದಾರರಾದ ಶೇಖರ್ ಶೆಟ್ಟಿ ಅವರು ಯೋಗದ ಮಹತ್ವ ಕುರಿತು ಮಾತನಾಡಿ,ಭಾರತೀಯ ಪರಂಪರೆಯಿಂದ ನಡೆದುಬಂದಂತಹ ಯೋಗಕ್ಕೆ ಇಂದು ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆತಿದೆ ಎಂದು ಹೇಳಿದರು.ನಿತ್ಯವೂ ಯೋಗ ಮಾಡುವುದರಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಮಾನಸಿಕವಾಗಿ ನೆಮ್ಮದಿ ಜೀವನ ಕಾಣಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೋಗಿ ಮನೆ ಟ್ರಸ್ಟ್ ಅಧ್ಯಕ್ಷರಾದ ವಸಂತ ಜೋಗಿ ಅವರು ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ಯೋಗ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಹಳ್ಳಿ ಭಾಗದ ಜನರಿಗೆ ಬಹಳಷ್ಟು ಪ್ರಯೋಜನ ವಾಗಲಿದೆ.ಯೋಗ ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಆಯುಷ್ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಕಾಲ್ತೋಡು ಡಾ.ವೀಣಾ ಕಾರಂತ ಅವರು ಮಾತನಾಡಿ,ನಮ್ಮ ಸುತ್ತಲಿನ ಜನರಿಗೆ ಅನುಕೂರಕರ ಚಟುವಟಿಕೆಗಳನ್ನು ಮಾಡಿಕೊಂಡಿರುವುದರಿಂದ ಜನರ ಜೀವನ ಕ್ರಮ ಸುಧಾರಿಸುವುದರ ಜೊತೆಗೆ ಆದರ್ಶ ವ್ಯಕ್ತಿಯಾಗಿ ಬದುಕುಕಲು ಸಹಕಾರಿ ಆಗುತ್ತದೆ ಎಂದರು.
ಡಾ.ಸುರೇಶ್ ಕೆ.ಎನ್.ಅಧ್ಯಕ್ಷ ರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಘಟಕ ತೀರ್ಥಹಳ್ಳಿ,S.S.L.C ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಜೋಗಿ ಕುಟುಂಬದ ಕುಮಾರಿ ಕನ್ನಿಕಾ ಜೋಗಿ ‌ಹಾಗೂ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ.ವೀಣಾ ಕಾರಂತರವರನ್ನು ಸನ್ಮಾನಿಸಲಾಯಿತು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ಆಯುರ್ವೇದ, ಆಹಾರ,ಯೋಗ ಮಾಹಿತಿ ಐಯನ್ನೊಳಗೊಂಡ ಪುಸ್ತಕಗಳನ್ನು ವಿತರಿಸಲಾಯಿತು.JCI ಉಪ್ಪುಂದ ಇದರ ಅಧ್ಯಕ್ಷ ಮಂಜುನಾಥ ದೇವಾಡಿಗ, ಉದಯ ಡಿ.ಆರ್, ಪುರುಷೋತ್ತಮ ದಾಸ್ ಉಪ್ಪುಂದ
ಉಪಸ್ಥಿತರಿದ್ದರು.
ಶ್ವೇತಾ ಜೋಗಿ ಪ್ರಾರ್ಥಿಸಿದರು.ರಾಜೇಶ್ ಜೋಗಿ ಬಂಟಕಲ್ಲು ಸ್ವಾಗತಿಸಿದರು.
ಸಂತೋಷ ಮೊಗವೀರ ನಿರೂಪಿಸಿದರು.ಮಂಜುನಾಥ ಕೊಡೇರಿ ವಂದಿಸಿದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page