ಕುಂಭಾಶಿ:ಶ್ರಾವಣ ಶಾಸ್ತಾರ ಮಿತ್ರ ಮಂಡಳಿ ಉದ್ಘಾಟನೆ
ಕುಂದಾಪುರ:ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಆಡಳಿತಕ್ಕೆ ಒಳಪಟ್ಟಿರುವ ಕುಂಭಾಶಿ ಶ್ರೀ ನಾಗಾಚಲ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಅದರ ಆಶ್ರಯದಲ್ಲಿ,ಶ್ರಾವಣ ಶಾಸ್ತಾರ ಮಿತ್ರ ಮಂಡಳಿಯು ಶುಭದಿನವಾದ ವಿಜಯದಶಮಿಯ ಸಂಧ್ಯಾ ಕಾಲದಲ್ಲಿ 5:00ಗೆ ನಾಗಾಚಲ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬಡಾಕೇರೆ ನಾಗಪಾತ್ರಿಗಳಾದ ವೇ.ಮೂ.ಲೋಕೇಶ ಅಡಿಗ ಮತ್ತು ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಮ್ ಶೃಂಗೇರಿ,ಇವರ ಮಾರ್ಗ ದರ್ಶನದಲ್ಲಿ ಶ್ರೀಮತಿ ಅಮಿತಾ ಅರುಣ್ ಕಲ್ಗುಜ್ಜಿಕರ್ ಸಹಕಾರದೊಂದಿಗೆ ಅತ್ಯಂತ ಭಕ್ತಿ ಪೂರ್ವಕವಾಗಿ ದೇವರನ್ನು ಪ್ರಾರ್ಥಿಸುದರ ಮುಖಾಂತರ ಉದ್ಘಾಟಿಸಲಾಯಿತು.
ಶ್ರಾವಣ ಶಾಸ್ತಾರ ಮಿತ್ರ ಮಂಡಳಿ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಬಗ್ವಾಡಿ, ಉಪಾಧ್ಯಕ್ಷರಾಗಿ ಪ್ರಕಾಶ್ ಎಂ.ಎಸ್.ಮಣೂರು, ನಿರೂಪಣಾ ಕಾರ್ಯದರ್ಶಿಯಾಗಿ ಕೆ. ಜಗದೀಶ ಮಣೂರು, ಕಾರ್ಯದರ್ಶಿಯಾಗಿ ಅರುಣಾ ಉಳ್ತೂರು,ಸದಸ್ಯರಾಗಿ ಸಂತೋಷ ಅಂಕದಕಟ್ಟೆ,
ರತ್ನಾಕರ ಅಸೊಡು,
ಪ್ರಥ್ವಿ ರಾಜ್ ಮಣೂರು,
ಜಯರಾಮ ಶಿರಿಯಾರ,ಮತ್ತು
ವಾಸುದೇವ ಅಸೊಡು ಆಯ್ಕೆಯಾಗಿದ್ದಾರೆ.