ಕುಂದಾಪುರ:ಸುರೇಂದ್ರ ಗುಡ್ಡೆಹೋಟೆಲ್ ಅವರಿಗೆ ಗಾಂಧಿ ಅಂತಾರಾಷ್ಟ್ರೀಯ ಪೀಸ್ ಅವಾರ್ಡ್ -2025.

ಕುಂದಾಪುರ:ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬಂದು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಮೀಕ್ಷೆ ನಡೆಸಿ,ಗುರುತಿಸಿ ಅವರನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡುವ ಸೇವೆಯನ್ನು ಗುರುತಿಸಿ ಗುಜರಾತ್ ರಾಜ್ಯದ ಗಾಂಧೀಜಿ ಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಟ್ಟದ ಗೂಗಲ್ ಮೀಟ್ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಮೂಲತಃ ಕುಂದಾಪುರ ತಾಲ್ಲೂಕಿನ ಸೇನಾಪುರ ಗ್ರಾಮದ ನಾಡ ಗುಡ್ಡೆಹೋಟೆಲ್ ನಿವಾಸಿ
ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ
ಸುರೇಂದ್ರ ಅವರಿಗೆ ಗಾಂಧೀಜಿ ಅಂತಾರಾಷ್ಟ್ರೀಯ ಪೀಸ್ ಅವಾರ್ಡ್ ನೀಡಲಾಯಿತು.
ಪ್ರಸ್ತುತ ಅವರು ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲೆ ಮಾಗಡಿ ರಸ್ತೆ ಬೆಂಗಳೂರು ದಕ್ಷಿಣ ಜಿಲ್ಲೆ ವಲಯ -02 ರಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.