ಗುಜ್ಜಾಡಿ:5ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮ
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನದಲ್ಲಿ 5ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀ ದೇವರಿಗೆ ಚಂಡಿಕಾಯಾಗ ಮತ್ತು ಮಹಾಅನ್ನಸಂತರ್ಪಣೆ,ಕುಣಿತ ಭಜನೆ ಹಾಗೂ ಸನ್ಮಾನ ಕಾರ್ಯಕ್ರಮ,ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಸಮಿತಿ ಅಧ್ಯಕ್ಷ ಬಾಬು.ಜೆ ಪೂಜಾರಿ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಉಪಾಧ್ಯಕ್ಷ ಕೃಷ್ಣ ಪೂಜಾರಿ,ಎಸ್.ಕೆ ಪೂಜಾರಿ ಬಗ್ವಾಡಿ,ನರಸಿಂಹ ಪೂಜಾರಿ ಅರೆಶಿರೂರು,ಆರತಿ ಎಡಕಂಟ,ಸತೀಶ ವಕ್ವಾಡಿ,ಬಾಬು ಪೂಜಾರಿ ಎಡಕಂಟ,ದುಗಪ್ಪ ಪೂಜಾರಿ ತಾರಾಪತಿ,ಕೆ.ಸುರೇಶ್ ಪೂಜಾರಿ ಚಿತ್ತೂರು,ಮಹಾಬಲ ದೇವಾಡಿಗ,ಉದಯ ಪೂಜಾರಿ ಉಪಸ್ಥಿತರಿದ್ದರು.ಪಾತ್ರಿಗಳಾದ ನಾರಾಯಣ ಪೂಜಾರಿ ಕೋಡಿ,ನರಸಿಂಹ ಪೂಜಾರಿ ಕೊಡಪಾಡಿ,ಮಂಜು ಪೂಜಾರಿ ಹಾಗೂ ಅರ್ಚಕರಾದ ಚಿಕ್ಕ ಪೂಜಾರಿ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.ಬಾಬು.ಜೆ ಪೂಜಾರಿ ಸ್ವಾಗತಿಸಿದರು.ಶಿಕ್ಷಕ ಗುರುರಾಜ ಪೂಜಾರಿ ನಿರೂಪಿಸಿದರು.ಎನ್.ಕೆ ಪೂಜಾರಿ ವಂದಿಸಿದರು.