ಮೇ.05,06 ರಂದು ಶ್ರೀಬೊಬ್ಬರ್ಯ ಪರಿವಾರ ದೇವರ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ,ಪುನರ್ ಪ್ರತಿಷ್ಠೆ
ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೇ.05 ಭಾನುವಾರ ಮತ್ತು ಮೇ.06 ಸೋಮವಾರ ನಡೆಯಲಿದೆ.
ಶ್ರೀಬೊಬ್ಬಯ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಮೇ.05 ರ ಭಾನುವಾರ ದಂದು ಸಂಜೆ 05 ಗಂಟೆಗೆ ನೂತನ ಶಿಲಾ ವಿಗ್ರಹವನ್ನು ಪುರಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುತ್ತದೆ.
ಸಂಜೆ 06 ಕ್ಕೆ ಗುರುಗಣಪತಿ ಪೂಜೆ, ಪ್ರತಿಷ್ಠಾ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು,ರಾತ್ರಿ 09 ಕ್ಕೆ ಭಜನಾ ಕಾರ್ಯಕ್ರಮ ಜರುಗಲಿವೆ.
ಮೇ.06 ರಂದು ಬೆಳಿಗ್ಗೆ 6 ಕ್ಕೆ ಭಜನಾ ಮಂಗಲೋತ್ಸವ,ಶ್ರೀಮಠ ಬಾಳೆಕುದ್ರು ಶ್ರೀ ಪರಮ ಪೂಜ್ಯ ನೃಸಿಂಹಾಶ್ರಮ ಸ್ವಾಮೀಜಿ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ.
ಸ್ವಾಮಿಗಳು ಶ್ರೀದೇವರ ಪರಿ ಕೆಲಶ ಸಹಿತ ಬ್ರಹ್ಮಕಲಾಶಾಭೀಷೇಕ ನೆರವೇರಿಸಲಿದ್ದಾರೆ.
ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಸಂಜೆ 4.ಕ್ಕೆ ಶ್ರೀ ಪರಮ ಪೂಜ್ಯ ಈಶವಿಠಲದಾಸ ಸ್ವಾಮಿಗಳು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಆಶೀರ್ವಚನ ನೀಡಲಿದ್ದಾರೆ.ಸಂಜೆ 05 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.ರಾತ್ರಿ 7.30 ರಿಂದ ಅತಿಥಿ ದಿಗ್ಗಜ ಕಲಾವಿದರ ಕೂಡುವಿಕೆಯಲ್ಲಿ ಅಬ್ಬರದ ಬೊಬ್ಬರ್ಯ ಯಕ್ಷಗಾನ ಬಯಲಾಟ ನಡೆಯಲಿದೆ.
ಸ್ವಯಂ ಸೇವಕರು ಸಕಲ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು,ಕೆಲಸ ಕಾರ್ಯ ಭರದಿಂದ ಸಾಗಿದೆ.