ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಂಸದರ ಕೊಡುಗೆ ಅಪರವಾದದ್ದು,ಬಿ.ವೈ ರಾಘವೇಂದ್ರ ಗೆಲುವು ನಿಶ್ಚಿತ

Share

ಕುಂದಾಪುರ:ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆಯನ್ನು ನೀಡಿರುವ ಸಂಸದರ ಸೇವೆ ಅಪಾರವಾದದ್ದು.ಜನಪರ ಕೆಲಸಗಳ ಮೂಲಕ ಕ್ಷೇತ್ರದಲ್ಲಿ ಜನಪ್ರೀತಿಗಳಿಸಿರುವ ಸಂಸದ ಬಿ.ವೈ ರಾಘವೇಂದ್ರ ಅವರ ಗೆಲುವು ನಿಶ್ಚಿತ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಸಂಸದ ಬಿ.ವೈ ರಾಘವೇಂದ್ರ ಅವರು ಮೂರು ಸಾವಿರ ಕೋಟಿ ಅನುದಾನ ಬೈಂದೂರು ಕ್ಷೇತ್ರಕ್ಕೆ ನೀಡಿದ್ದಾರೆ.ಬೈಂದೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಅವರನ್ನು ಕ್ಷೇತ್ರದ ಜನತೆ ಆಶೀರ್ವದಿಸಲಿದ್ದಾರೆ ಎಂದು ಶಾಸಕರು ಹೇಳಿದರು.ಸಮೃದ್ದ ನಡಿಗೆ ಮೂಲಕ ಹದಿನಾರು ದಿನಗಳ ಕಾರ್ಯಕ್ರಮ ಆಯೋಜಿಸಿಕೊಲ್ಳಾಗಿದೆ.ಚುನಾವಣೆಯ ಸಿದ್ದತೆ ನಡೆಯುತ್ತಿದ್ದು ಕಾರ್ಯಕರ್ತರು ಒಗ್ಗೂಟ್ಟಿನ ಕೆಲಸವನ್ನು ಮಾಡುವಲ್ಲಿ ಉತ್ಸುಕರಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ನಾಯಕರು ಸಣ್ಣಪುಣ್ಣ ರಾಜಕೀಯವನ್ನು ಇಟ್ಟುಕೊಂಡು ನಮ್ಮ ಪಕ್ಷದ ಕಾರ್ಯಕರ್ತರನ್ನು ಹೆಸದರಿಸುವ ಪ್ರಯತ್ನ ಮತ್ತು ಅಧಿಕಾರದ ಅವಕಾಶ ಉಪಯೋಗಿಸಿಕೊಂಡು ಒತ್ತಡ ಹೇರುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ.ಕಾರ್ಯಕರ್ತರಿಗೆ ತೊಂದರೆಯಾದರೆ ನೇರ ನಾಯಕರಿಗೆ ಸವಾಲೆಸೆಯಲು ಸಿದ್ದರಿದ್ದೇವೆ ಎಂದು ಶಾಸಕರು ಎಚ್ಚರಿಸಿದರು.ಬಿಜೆಪಿ ಪಕ್ಷ ಕಾರ್ಯಕರ್ತರಿಂದ ಬೆಳೆದು ನಿಂತ ಪಕ್ಷವಾಗಿದೆ.ಪ್ರತಿ ಕಾರ್ಯಕರ್ತನು ಪಕ್ಷದ ಬೆನ್ನಲುಬಾಗಿದ್ದಾರೆ.ಸಂಘರ್ಷದ ರಾಜಕಾರಣವನ್ನು ಎಂದಿಗೂ ಸಹಿಸಲ್ಲ ಎಂದು ಹೇಳಿದರು.ತೊಂದರೆಯಾಗುವ ರಾಜಕೀಯ ಬೇಡ ಎನ್ನುವುದು ನನ್ನ ಆಶಯ.ಕಟ್ಟೆ ರಾಜಕೀಯಕ್ಕೆ ಕಿವಿ ಕೊಡಲ್ಲ.ಸಾಧನೆ ಮೂಲಕ ಬಿಜೆಪಿ ಗುರುತಿಸಿಕೊಳ್ಳಲಿದೆ ಎಂದರು.ಈ ಸಂದರ್ಭದಲ್ಲಿ
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಚುನಾವಣಾ ಉಸ್ತುವಾರಿಗಳಾದ ಬಾನು ಪ್ರಕಾಶ್ ಜೀ,ಬಿಜೆಪಿ ಮುಖಂಡರಾದ ಅಶೋಕ ಮೂರ್ತಿ,ಸದಾನಂದ ಉಪ್ಪಿನಕುದ್ರು,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ,ಬೈಂದೂರು ಬಿಜೆಪಿ ಮಂಡಲದ ಕಾರ್ಯದರ್ಶಿ ಮಹೇಂದ್ರ ಪೂಜಾರಿ,ಉಮೇಶ ಕಲ್ಗದ್ದೆ,ಬಂದೂರು ಬಿಜೆಪಿ ಮಂಡಲದ ಕೋಶಾಧಿಕಾರಿ ಗಣೇಶ ಗಾಣಿಗ ಉಪಸ್ಥಿತರಿದ್ದರು.
ವರದಿ-ಅಲ್ಪಾಜ್
ಸುದ್ದಿಗಳನ್ನು ನಮ್ಮ ಜಾಲಾತಾಣದಲ್ಲಿ ಪ್ರಕಟಿಸಲು ಈ ನಂಬರ್ ವಾಟ್ಸಪ್ ಮಾಡಿ-9141825696

Advertisement

Share

Leave a comment

Your email address will not be published. Required fields are marked *

You cannot copy content of this page