ಶಿಕ್ಷಕ ಸುರೇಂದ್ರ ಗುಡ್ಡೆಹೋಟೆಲ್‌ಗೆ ನ್ಯಾಷನಲ್ ಬಿಲ್ಡರ್ ಅವಾರ್ಡ್
ಕುಂದಾಪುರ:ಉತ್ತಮ ತಲೆಮಾರುಗಳ ನಿರ್ಮಾಣ ಅಭಿಯಾನ ಕಾರ್ಯಕ್ರಮ ಮತ್ತು ಭವಿಷ್ಯದಲ್ಲಿ ಸಂಪೂರ್ಣ ಸಾಕ್ಷರ ಕರ್ನಾಟಕ ರಾಜ್ಯವನ್ನಾಗಿ ಮಾಡುವ ಉದ್ದೇಶದಡಿಯಲ್ಲಿ ಇತರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬೆಂಗಳೂರಿಗೆ ವಲಸೆ ಬಂದ ಕುಟುಂಬಗಳ ಸದಸ್ಯರ ಮಕ್ಕಳನ್ನು ಸಮೀಕ್ಷೆ ನಡೆಸಿ ಸರಕಾರಿ ಮತ್ತು ಅನುದಾನಿತ ಶಾಲೆಗೆ ದಾಖಲಾತಿ ಮಾಡುತ್ತಿರುವ ರಾಷ್ಟçಮಟ್ಟದ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ನಾಡ ಗುಡ್ಡೆಹೋಟೆಲ್ ನಿವಾಸಿ ಶಿಕ್ಷಕ ಸುರೇಂದ್ರ ಗುಡ್ಡೆಹೋಟೆಲ್ ಅವರಿಗೆ ಉತ್ತರ ಪ್ರದೇಶ ರಾಜ್ಯದ ಶಾಂತಿ ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆ ನ್ಯಾಷನಲ್ ಬಿಲ್ಡರ್ ಅವಾರ್ಡ್-೨೦೨೩ನ್ನು ನೀಡಿ ಗೌರವಿಸಿದೆ.ಅವರು ಪ್ರಸ್ತುತ ಶ್ರೀಸಿದ್ಧಲಿಂಗೇಶ್ವರ ಕನ್ನಡ ಅನುದಾನಿತ ಪ್ರೌಢಶಾಲೆ ಮಾಗಡಿ ರಸ್ತೆ ಬೆಂಗಳೂರು ನಗರದಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ.