ಕಂಚುಗೋಡು ಶಾಲೆ:ಯೋಗ ತರಬೇತಿ ಶಿಬಿರ ಉದ್ಘಾಟನೆ
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಉಚಿತ ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಗಿರಿಜಾ.ಎಂ ಉದ್ಘಾಟಿಸಿದರು,ಯೋಗ ಗುರು ನಾರಾಯಣ ದೇವಾಡಿಗ,ಶಾಲಾ ಎಸ್‍ಡಿಎಂಸಿ ಸದಸ್ಯರಾದ ಭಾರತಿ,ಲೀಲಾವತಿ,ಅಂಗನವಾಡಿ ಕಾರ್ಯಕರ್ತೆ ರೇಣುಕಾ,ಸಹ ಶಿಕ್ಷಕರಾದ ನಾಗಮ್ಮ,ಹರ್ಷ,ಉಷಾ ಉಪಸ್ಥಿತರಿದ್ದರು.ನಿವೃತ್ತ ಮುಖ್ಯೋಪಾಧ್ಯಾಯರಾದ ಯೋಗ ಗುರು ನಾರಾಯಣ ದೇವಾಡಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಕಾಲ ಉಚಿತವಾಗಿ ಯೋಗ ತರಬೇತಿಯನ್ನು ನೀಡಲಿದ್ದಾರೆ.











































































































































































































































































































































































































































































































































































































































































































































































































































































































































































































































































































































































































































































































































































































































































