ಗಂಗೊಳ್ಳಿ:ಶ್ರೀಮಹಾಂಕಾಳಿ ಅಮ್ಮನವರ ಜಾತ್ರಾ ಮಹೋತ್ಸವ
ಕುಂದಾಪುರ:ಕರ್ನಾಟಕ ಕರಾವಳಿ ಪ್ರಸಿದ್ಧ ಮಾರಿ ಜಾತ್ರೆ ಎಂದೆ ಹೆಸರುವಾಸಿಯಾದ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಗ್ರಾಮ ದೇವತೆಯಾದ ಶ್ರೀಮಹಾಂಕಾಳಿ ಅಮ್ಮನವರ ಎರಡನೇ ದಿನದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ಸಂಪ್ರದಾಯ ಬದ್ಧವಾಗಿ ನಡೆಯಿತು.
ಶ್ರೀಮಹಾಂಕಾಳಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದೇವಿಗೆ ಅಲಂಕಾರ ಪೂಜೆ,ಮಂಗಳಾರತಿ ಸೇವೆ,ಶ್ರೀದೇವರ ಸಂದರ್ಶನ ಹಾಗೂ ಪ್ರಸಾದ ವಿತರಣೆ ಜರುಗಿತು.
ಅಕ್ಕಿರೊಟ್ಟಿ ಪ್ರಸಾದ ವಿತರಣೆ:ಶ್ರೀದೇವಿಗೆ ಸಮರ್ಪಿಸಿದ ಅಕ್ಕಿಯಿಂದ ಮಾಡಿದ ರೊಟ್ಟಿ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.ಅಮ್ಮನವರ ಪ್ರಸಾದವನ್ನು ಸ್ವೀಕರಿಸಲೆಂದೆ,ಕುಂದಾಪು,ಬೈಂದೂರು ಭಾಗದ ಭಕ್ತರು ಸೇರಿದಂತೆ,ಭಟ್ಕಳ,ಹೊನ್ನವಾರ,ಕಾರವಾರ,ಉಡುಪಿ,ಮಂಗಳೂರು ಭಾಗದಿಂದಲೂ ಆಗಮಿಸುತ್ತಾರೆ.ಅಕ್ಕಿ ರೊಟ್ಟಿ ಪ್ರಸಾದವನ್ನು ನೀಡುವುದು ಶ್ರೀಮಾರಿಕಾಂಬೆ ದೇವಿಯ ಜಾತ್ರೆಯ ವಿಶೇಷತೆ ಆಗಿದೆ.ಇಲ್ಲಿ ವಿತರಿಸುವ ಪ್ರಸಾದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಹಿರಿಯರಾದ ರಾಮಪ್ಪ ಖಾರ್ವಿ ಅವರು ಹೇಳುತ್ತಾರೆ.