ಹೆಮ್ಮಾಡಿ:ಕಟ್ಟಡ ನಿರ್ಮಾಣ ಕಾರ್ಯ ಸಹಿತ ತೋಟದ ಕೆಲಸಗಳು ಸಹ ನಡೆಯದಂತಹ ಪರಿಸ್ಥಿತಿ ಉದ್ಭವವಾಗಿದೆ-ಬಿ.ಎಂ ಸುಕುಮಾರ್ ಶೆಟ್ಟಿ
ಕುಂದಾಪುರ:ಕಠಿಣವಾದ ಕಾನೂನನ್ನು ಜಿಲ್ಲೆಯಲ್ಲಿ ಜಾರಿ ಮಾಡಿರುವುದರಿಂದ ಲಾರಿ ಮಾಲೀಕರು ಮತ್ತು ಚಾಲಕರಿಗೆ ಬಹಳಷ್ಟು ತೊಂದರೆ ಆಗಿದ್ದು ಕಟ್ಟಡ ನಿರ್ಮಾಣ ಕಾರ್ಯ ಸಹಿತ ತೋಟದ ಕೆಲಸಗಳು ಸಹ ನಡೆಯದಂತಹ ಪರಿಸ್ಥಿತಿ ಉದ್ಭವವಾಗಿದೆ.ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.ಲಾರಿ ಮತ್ತು ಟೆಂಪೊ ಮಾಲೀಕರು ಹಾಗೂ ಚಾಲಕರ ಸಂಘ ಬೈಂದೂರು ವಲಯದ ವತಿಯಿಂದ ಹೆಮ್ಮಾಡಿಯಲ್ಲಿ ನಡೆಯುತ್ತಿರುವ 5ನೇ ದಿನದ ಕಟ್ಟಡ ಸಾಮಾಗ್ರಿ ಸಾಗಾಟದ ವಾಹನಗಳ ಅನಿರ್ದಿಷ್ಟವಾಧಿ ಮುಷ್ಕರದಲ್ಲಿ ಭಾನುವಾರ ಅವರು ಮಾತನಾಡಿದರು.
ಕಲ್ಲು,ಮಣ್ಣು,ಮರಳು ಸಾಗಾಟದ ಲಾರಿಗಳ ಸಂಚಾರಕ್ಕೆ ಕಾನೂನಿನ ಮೂಲಕ ನಿಯಂತ್ರಣ ಹೇರಿದ್ದರಿಂದ ಉಡುಪಿ ಜಿಲ್ಲೆಗೆ ಬಹಳಷ್ಟು ತೊಂದರೆ ಆಗಿದ್ದು ಜನ ಜೀವನ ಅಸ್ಥವ್ಯಸ್ತವಾಗಿದೆ.ಕೂಲಿ ಕಾರ್ಮಿಕರಿಗೆ ಕೆಲಸವು ಸಿಗುತ್ತಿಲ್ಲ ಹೋಟೆಲ್,ಅಂಗಡಿಗಳಲ್ಲಿ ವ್ಯಾಪಾರ ಕುಂಠಿತಗೊಂಡಿದೆ ಎಂದರು.ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಮಂತ್ರಿಗಳನ್ನು ಭೇಟಿಮಾಡಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಲಾರಿ ಮತ್ತು ಟೆಂಪೊ ಮಾಲೀಕರು ಹಾಗೂ ಚಾಲಕರ ಸಂಘ ಬೈಂದೂರು ವಲಯದ ಜಂಟಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಮಾತನಾಡಿ,ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಹೆದ್ದಾರಿ ಬದಿಯಲ್ಲಿ ಗಾಡಿಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ದೃಷ್ಟಿಯಿಂದ ರಾತ್ರೋರಾತ್ರಿ ಗಾಡಿಗಳ ಮೇಲೆ ವಾಹನವನ್ನು ತೆರವುಗೊಳಿಸಬೇಕ್ಕುನ್ನುವ ಕುರಿತು ನೋಟಿಸ್‍ನ್ನು ಅಂಟಿಸಿ ಹೋಗಲಾಗಿದೆ.ಅನ್ಯಾಯ ವಾದಾಗ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಸಾರ್ವಜನಿಕರಿಗೆ ಅಧಿಕಾರಗಳು ಮತ್ತು ಸರಕಾರದ ವಿರುದ್ಧ ಪ್ರತಿಭಟಿಸುವ ಹಕ್ಕು ಇಲ್ಲವೆ ಎಂದು ಪ್ರಶ್ನಿಸಿದರು.ಕಳೆ ಐದು ದಿನಗಳಿಂದ ಜಿಲ್ಲಾದ್ಯಂತ ಲಾರಿ ಮುಷ್ಕರ ನಡೆಯುತ್ತಿದ್ದರು ಅಧಿಕಾರಿಗಳ ಮಟ್ಟದಲ್ಲಿ ನಮ್ಮನ್ನು ಕರೆಸಿ ಸಮಸ್ಯೆಗಳನ್ನು ಇತ್ಯಾರ್ಥ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳದೆ ಜಿಲ್ಲಾಡಳಿತ ನಿರುತ್ಸಾಹದ ಧೋರಣೆಯನ್ನು ತಾಳುತ್ತಿದೆ ಎಂದು ದೂರಿದರು.ಬೇಡಿಕೆಗಳು ಈಡೇರಿಕೆ ಆಗುವ ತನಕ ಹೋರಾಟವನ್ನು ಕೈಬಿಡುವ ಮಾತೆ ಇಲ್ಲಾ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭ ಸಂಘದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.