ಕೊಲ್ಲೂರು:ಕೆರೆಗೆ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸಾವು,ತಾಯಿ ರಕ್ಷಣೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಪಂಚಾಯತ್ ನಂದ್ರೋಳ್ಳಿ ಎಂಬಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.ತಾಯಿಯನ್ನು ರಕ್ಷಣೆ ಮಾಡಿದ ಘಟನೆ ಶನಿವಾರ ನಡೆದಿದೆ.
ಧನರಾಜ್ ಸತೀಶ್ 13 (ಗಂಡು ಮಗು),ಛಾಯ ಸತೀಶ್ 7 (ಹೆಣ್ಣು ಮಗು) ಮೃತಪಟ್ಟವರು.ತಾಯಿ ಶೀಲಾ ಸತೀಶ್ ಮಡಿವಾಳ (34) ಸ್ಥಿತಿ ಗಂಭೀರವಾಗಿದೆ.