ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆ,ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

Share

ಕುಂದಾಪುರ:ಸಂಗೀತ ಕೇಳುವುದರಿಂದ ಕಿವಿಗೆ ಇಂಪು ನೀಡುವುದರ ಜತೆಗೆ ದೇಹದಲ್ಲಿ ಖುಷಿಯ ಹಾರ್ಮೋನ್‍ಗಳು ಉತ್ಪತ್ತಿಯಾಗಿ ಮನಸ್ಸು ಲವಲವಿಕೆಯಿಂದ ಕೂಡಿರಲು ಸಹಕರಿಸುತ್ತದೆ.ಮನವು ಖಿನ್ನತೆಯಿಂದ ಕೂಡಿದ್ದಾಗ ಸಂಗೀತ ಕೇಳುವುದರಿಂದ ಒತ್ತಡ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ.ಸಂಗೀತಕ್ಕೆ ಮಾನಸಿಕ ಒತ್ತಡವನ್ನು ಹೊಗಲಾಡಿಸುವ ತಾಕತ್ತು ಇದೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಕೆ ಹೇಳಿದರು.
ಶ್ರೀದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆ ಮಸ್ಕಿ-ನಾವುಂದ ವತಿಯಿಂದ ಹಿಂದು ಅಭ್ಯುದಯ ಶ್ರೀಮಾಂಗಲ್ಯ ಮಹಾಗಣಪತಿ ಮಂಟಪ ನಾವುಂದದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಕಾಲದ ಇತಿಹಾಸವನ್ನು ಹೊಂದಿರುವ ಸಂಗೀತ ಕ್ಷೇತ್ರ ಉಳಿಯಬೇಕಾದರೆ ಇಂದಿನ ಯುವ ಪೀಳಿಗೆಗೆ ಸಂಗೀತದಲ್ಲಿರುವ ನಾನಾ ಪ್ರಕಾರಗಳನ್ನು ಪರಿಚಯಿಸುವ ಕೆಲಸ ಮಾಡಬೇಕಾಗಿದೆ.ಪಾಠದ ಜತೆಗೆ ಸಂಗೀತಭ್ಯಾಸ ಮಾಡುವುದರಿಂದ ಜ್ಞಾಪಕ ಶಕ್ತಿಯನ್ನು ವೃದ್ಧಿಗೊಳಿಸಬಹು ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದುಸ್ಥಾನಿ ಸಂಗೀತ ಗುರುಗಳಾದ ವಿದ್ವಾನ್ ಶರತ್ ನಾಡ ಮಾತನಾಡಿ,ಸಂಗೀತ ಕ್ಷೇತ್ರದಲ್ಲಿ ಕಲಿಕೆ ಎನ್ನುವುದು ನಿರಂತರವಾದ್ದದು ಯಾವುದೇ ರೀತಿಯ ಅಧ್ಯಾಯನ ಮಾಡುವಾಗ ಅದರ ಸೂಕ್ಷ್ಮತೆಯನ್ನು ತಿಳಿದುಕೊಳ್ಳುವುದು ಅತಿ ಮುಖ್ಯ ಎಂದರು.


ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿ,ಹಿಂದು ಅಭ್ಯುದಯ ಸಂಘ ನಾವುಂದ ಉಪಾದ್ಯಕ್ಷ ಪ್ರವೀಣ್,ಮಂಜುನಾಥ ಸಾಲಿಯಾನ್ ತ್ರಾಸಿ,ತೀರ್ಪುಗಾರರಾದ ವಿನೀಶ್ ಭಾರಧ್ವಾಜ್,ಅಪೂರ್ವ ಅವಭೃತ ಉಪಸ್ಥಿತರಿದ್ದರು.ಹರೀಶ್ ಗೌಡ ಸ್ವಾಗತಿಸಿದರು.ಶಿಕ್ಷಕ ಮಹಾಬಲ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.ನಾಗರಾಜ ದೇವಳಿ ನಿರೂಪಿಸಿದರು.ಅಂತಿಮ ಸುತ್ತಿನ ಕರೋಕೆ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 25ಕ್ಕೂ ಅಧಿಕ ಸಂಗೀತ ವಿದ್ಯಾರ್ಥಿಗಳು ಭಾಗವಹಿಸಿದ್ದರು

ವಿದ್ವಾನ್ ದಿ.ಅನಂತ ಹೆಬ್ಬಾರ್‍ಗೆ ಪುಷ್ಪ ನಮನ
ಶ್ರೀದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಲೆ ಮಸ್ಕಿ ನಾವುಂದ ವತಿಯಿಂದ ಭಾನುವಾರ ನಾವುಂದದಲ್ಲಿ ನಡೆದ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯಲ್ಲಿ ವಿದ್ವಾನ್ ದಿ.ಅನಂತ ಹೆಬ್ಬಾರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಲಾಯಿತು.

Advertisement

Share

Leave a comment

Your email address will not be published. Required fields are marked *

You cannot copy content of this page