ಹೆಮ್ಮಾಡಿ:ಲಾರಿ ಮತ್ತು ಟೆಂಪೊ ಮಾಲೀಕರ ಸಂಘದ ಅಂತ್ಯ
ಕುಂದಾಪುರ:ನಮ್ಮ ಸಂಘಟನೆಯ ಕೂಗು ರಾಜ್ಯಕ್ಕೆ ಮುಟ್ಟಿದೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು ಸಂಧಾನಕ್ಕೆ ಅಧಿಕಾರಿಗಳು ಒಪ್ಪಿದ್ದಾರೆ ಸಾಕಷ್ಟು ಚರ್ಚೆ ಕೂಡ ಆಗಿದೆ.ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿದ್ದರಿಂದ ಮುಷ್ಕರದ ಅಂಗವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಗಳನ್ನು ತೆರವು ಗೊಳಿಸಲಾಗುವುದು ಎಂದು ಲಾರಿ ಮತ್ತು ಟೆಂಪೊ ಮಾಲೀಕರು ಮತ್ತು ಚಾಲಕರ ಸಂಘ ಬೈಂದೂರು ವಲಯದ ಜಂಟಿ ಅಧ್ಯಕ್ಷ ದಿವಾಕರ ಶೆಟ್ಟಿ ನೈಲಾಡಿ ಹೇಳಿದರು.
ಲಾರಿ ಮತ್ತು ಟೆಂಪೊ ಮಾಲೀಕರು ಮತ್ತು ಚಾಲಕರ ಸಂಘ ಬೈಂದೂರು ವಲಯದ ವತಿಯಿಂದ ಹೆಮ್ಮಾಡಿಯಲ್ಲಿ ನಡೆಯುತ್ತಿರುವ ಆರನೇ ದಿನದ ಕಟ್ಟಡ ಸಾಮಾಗ್ರಿ ಸಾಗಾಟದ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರದ ಅಂಗವಾಗಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.ಬೇಡಿಕೆಗಳ ಈಡೇರಿಕೆಗಾಗಿ ಹತ್ತು ದಿನಗಳ ಕಾಲದ ಕಾಲವಕಾಶವನ್ನು ಕೇಳಿದ್ದೇವೆ ಮುಂದಿನ ಹತ್ತು ದಿನಗಳ ವರಗೆ ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸದೆ ಇದ್ದರೆ ಮತ್ತೆ ಸಂಘಟಿತರಾಗಿ ಹೋರಾಟಕ್ಕೆ ಇಳಿಯಲಾಗುವುದು ಎಂದು ಹೇಳಿದರು.
ಸಂಘದ ಜಂಟಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಮಾತನಾಡಿ,ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಿರುವುದರಿಂದ ಲಾರಿಗಳ ಮಾಲೀಕರು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಕೊಳ್ಳಬೇಕು.ಕೆಂಪು ಕಲ್ಲು ತುಂಬಿದ ಲಾರಿಗಳಿಗೆ ಯಾವುದೆ ರೀತಿಯ ತೊಂದರೆ ಕೊಡಲಾಗದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.ಈ ಸಂದರ್ಭ ರಾಜು ಕುಲಾಲ್ ಆಲೂರು,ರಾಜು ಗಾಣಿಗಾ ತ್ರಾಸಿ,ವಾಸುದೇವ ಸೇರಿಗಾರ್ ಗಂಗೊಳ್ಳಿ,ಗೋಪಾಲ ನಾಯ್ಕ್ ನೆಂಪು,ಸತೀಶ ದೇವಾಡಿಗ ಹೆಮ್ಮಾಡಿ,ಪ್ರವೀಣ್ ಶೆಟ್ಟಿ ನಾರ್ಕಳಿ,ರಾಘವೇಂದ್ರ ಶೆಟ್ಟಿ ಕಾಡೇರಿಮನೆ ಮುಳ್ಳಿಕಟ್ಟೆ,ಸಂಘದ ಸದಸ್ಯರು ಉಪಸ್ಥಿತರಿದ್ದರು.