ಪ್ರಥಮಾ ಆರ್ ತಾಳಿಕೋಟಿ ರಾಜ್ಯಕ್ಕೆ 2ನೇ ರ್ಯಾಂಕ್
ಕುಂದಾಪುರ:ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹಾಗೂ ಆಲೂರು ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ರಾಜಶೇಖರ ತಾಳಿಕೋಟಿ ಅವರ ಪುತ್ರಿ ಪ್ರಥಮಾ ಆರ್ ತಾಳಿಕೋಟಿ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 618 ಅಂಕಗಳನ್ನು ಗಳಿಸಿದ್ದು ಮರು ಮೌಲ್ಯ ಮಾಪನದ ನಂತರ 625 ರಲ್ಲಿ 624 ಅಂಕವನ್ನು ಪಡೆದು ರಾಜ್ಯದಲ್ಲಿ 2ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಆಂಗ್ಲ ಭಾಷಾ ವಿಷಯದಲ್ಲಿ 94 ಅಂಕಗಳಿಸಿದ ಪ್ರಥಮಾ ಆರ್ ತಾಳಿಕೋಟಿ ಅವರು ಮರು ಮಾಲ್ಯ […]

















































































































































































































































































































































































































































































































































































































































































































































































































































































































































































































































































































































































































































































































































































































































































