ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ,ಸಾಧಕ ಕಲಾವಿದರಿಗೆ ಸನ್ಮಾನ
ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ ಕೂಡ್ಲಿಹಿತ್ಲು ಎಂಬಲ್ಲಿ ಯಕ್ಷಪ್ರೇಮಿ ರಶ್ಮಿತಾ ಸಂಜಯ್ ಮೊವಾಡಿ ಅವರ ಪ್ರಾಯೋಜಕತ್ವದಲ್ಲಿ ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಗುರುವಾರ ನಡೆಯಿತು.ಸಿಗಂದೂರು ಮೇಳದವರಿಂದ ಮತದಾನ ಜಾಗೃತಿ ಕುರಿತು ವಿಶೇಷ ನಾಟ್ಯ ಪ್ರದರ್ಶನವನ್ನು ಮಾಡಲಾಯಿತು.ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಲಾಯಿತು.ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದ ಆಯೋಜಕರಾದ ರಶ್ಮಿತಾ ಸಂಜಯ್ ಮೊವಾಡಿ ಅವರು ಸಾಧಕ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ,ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಎನ್ನುವುದು ಬಹಳ ದಿನಗಳ ಕಾಲದ […]