ಶವ ಸಂರಕ್ಷಕ ನೂತನ ಫ್ರೀಜರ್ ಕೊಡುಗೆ

ಕುಂದಾಪುರ:ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ವತಿಯಿಂದ ಗಂಗೊಳ್ಳಿ ಶ್ರೀ ವೀರೇಶ್ವರ ಸೇವಾ ಟ್ರಸ್ಟ್‍ಗೆ ಶವ ಸಂರಕ್ಷಕ ನೂತನ ಫ್ರೀಜರ್‍ನ್ನು ಕೊಡುಗೆಯಾಗಿ ಶುಕ್ರವಾರ ನೀಡಲಾಯಿತು.ಶ್ರೀ ವಿರೇಶ್ವರ ದೇವಸ್ಥಾನದ ಅರ್ಚಕ ರವೀಶ್ ಭಟ್ ಅವರು ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಹಿಂಜಾವೇ ಮುಖಂಡ ವಾಸುದೇವ ಗಂಗೊಳ್ಳಿ,ಯಶವಂತ ಗಂಗೊಳ್ಳಿ,ನವೀನ್ ಗಂಗೊಳ್ಳಿ,ಟ್ರಸ್ಟ್ ಅಧ್ಯಕ್ಷ ಅಕ್ಷಯ್ ಹಾಗೂ ಕಾರ್ತಿಕ್,ಪ್ರೀತೇಶ್,ಮೋಹನ್,ಮಹೇಶ್ ದಾಕಹಿತ್ಲು ಉಪಸ್ಥಿತರಿದ್ದರು.ಶ್ರೀ ವೀರೇಸ್ವರ ಸೇವಾ ಟ್ರಸ್ಟ್ ಗಂಗೊಳ್ಳಿ ನಿರ್ವಹಣೆ ಮಾಡಲಿದೆ.ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಸಾಮಾಜಿಕ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ 78.84 ಫಲಿತಾಂಶ

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ಗಂಗೊಳ್ಳಿ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 78.84 ಫಲಿತಾಶ ಗಳಿಸಿದೆ.ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ 586 ಅಂಕ,ಚಂದನಾ 569 ಅಂಕ,ಬಿ.ಶೈಲೇಶ್ 546 ಅಂಕ ಹಾಗೂ ಸಿಂಚನಾ 536 ಅಂಕ,ಐಶೂ 533 ಅಂಕ,ಲೇಖಾ 516 ಅಂಕ ಗಳಿಸಿದ್ದಾರೆ.

ಲಿಯಾ ಜೌಟ್‍ಲೆಟ್ ಕೋಟೇಶ್ವರದಲ್ಲಿ ಶುಭಾರಂಭ

ಕುಂದಾಪುರ:ಭಾರತದಲ್ಲಿ ಮೊದಲ ಬಾರಿಗೆ ಇಸ್ರೇಲಿನ ಪ್ರಸಿದ್ಧ ಹೆಟ್ರಾ ಉತ್ಪನ್ನಗಳ ಲಿಯಾ ಔಟ್‍ಲೆಟ್ ನೂತನ ಮಳಿಗೆ ಶುಭಾರಂಭ ಕಾರ್ಯಕ್ರಮ ಕುಂದಾಪುರ ತಾಲೂಕಿನ ಕೋಟೇಶ್ವರದ ಬೈಪಾಸ್ ಸಮೀಪ ಇರುವ ಸನ್ವಿಜಯ್ ಪರ್ಲ್ ಕಟ್ಟಡದಲ್ಲಿ ಭಾನುವಾರ ನಡೆಯಿತು.ಇಸ್ರೇಲ್ ದೇಶದಲ್ಲಿ ತಯಾರಿಸಲ್ಪಡುವ ಬಹು ಬೇಡಿಕೆ ಮತ್ತು ಉತ್ತಮ ಗುಣಮಟ್ಟದ ಸನೋ ಉತ್ಪನ್ನಗಳು ಕೋಟೇಶ್ವರದ ಲಿಯಾ ಜೌಟ್‍ಲೆಟ್ ಮಳಿಗೆಯಲ್ಲಿ ದೊರಕಲಿದೆ.ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡುವುದರ ಮುಖೇನ ನವ ಉದ್ಯಮವನ್ನು ಪ್ರೋತ್ಸಾಹಿಸ ಬೇಕಾಗಿದೆ.ಉದ್ಯಮಿ ಅಭಿನಂಧನ್ ಶೆಟ್ಟಿ ಅವರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿ,ಇಸ್ರೇಲ್ ದೇಶದಲ್ಲಿ […]

You cannot copy content of this page