ಶಿರೂರು:ಪ್ರೌಢಶಾಲೆ ವಿದ್ಯಾರ್ಥಿ ಆತ್ಮಹತ್ಯೆ

ಬೈಂದೂರು:ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಲು ವಿಳಂಬ ಮಾಡಿದರು ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಮೇಲ್ಪಂಕ್ತಿ ಎಂಬಲ್ಲಿ ನಡೆದಿದೆ.ನಿತಿನ್ ಆಚಾರ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಈತ ಬೈಂದೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಾಗಿದ್ದು ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಸೋಮವಾರ ಸಂಸ್ಥೆಗೆ ವರ್ಗಾವಣೆ ಪತ್ರ ಪಡೆಯಲು ಹೋದ ವೇಳೆ ಅಲ್ಲಿ ಶಿಕ್ಷಕರು ಬೈದಿದ್ದಾರೆ ಎಂಬ ಕಾರಣಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೆತ್ತವರು ದೂರು ನೀಡಿದ್ದಾರೆ. […]

ಶವ ಸಂರಕ್ಷಕ ನೂತನ ಫ್ರೀಜರ್ ಕೊಡುಗೆ

ಕುಂದಾಪುರ:ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ವತಿಯಿಂದ ಗಂಗೊಳ್ಳಿ ಶ್ರೀ ವೀರೇಶ್ವರ ಸೇವಾ ಟ್ರಸ್ಟ್‍ಗೆ ಶವ ಸಂರಕ್ಷಕ ನೂತನ ಫ್ರೀಜರ್‍ನ್ನು ಕೊಡುಗೆಯಾಗಿ ಶುಕ್ರವಾರ ನೀಡಲಾಯಿತು.ಶ್ರೀ ವಿರೇಶ್ವರ ದೇವಸ್ಥಾನದ ಅರ್ಚಕ ರವೀಶ್ ಭಟ್ ಅವರು ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಹಿಂಜಾವೇ ಮುಖಂಡ ವಾಸುದೇವ ಗಂಗೊಳ್ಳಿ,ಯಶವಂತ ಗಂಗೊಳ್ಳಿ,ನವೀನ್ ಗಂಗೊಳ್ಳಿ,ಟ್ರಸ್ಟ್ ಅಧ್ಯಕ್ಷ ಅಕ್ಷಯ್ ಹಾಗೂ ಕಾರ್ತಿಕ್,ಪ್ರೀತೇಶ್,ಮೋಹನ್,ಮಹೇಶ್ ದಾಕಹಿತ್ಲು ಉಪಸ್ಥಿತರಿದ್ದರು.ಶ್ರೀ ವೀರೇಸ್ವರ ಸೇವಾ ಟ್ರಸ್ಟ್ ಗಂಗೊಳ್ಳಿ ನಿರ್ವಹಣೆ ಮಾಡಲಿದೆ.ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಸಾಮಾಜಿಕ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ 78.84 ಫಲಿತಾಂಶ

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ಗಂಗೊಳ್ಳಿ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 78.84 ಫಲಿತಾಶ ಗಳಿಸಿದೆ.ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ 586 ಅಂಕ,ಚಂದನಾ 569 ಅಂಕ,ಬಿ.ಶೈಲೇಶ್ 546 ಅಂಕ ಹಾಗೂ ಸಿಂಚನಾ 536 ಅಂಕ,ಐಶೂ 533 ಅಂಕ,ಲೇಖಾ 516 ಅಂಕ ಗಳಿಸಿದ್ದಾರೆ.

You cannot copy content of this page