ಶೃಂಗೇರಿ:ಗುರುನಮನ ಕಾರ್ಯಕ್ರಮ,ವಿದ್ವಾಂಸರಿಗೆ ಸನ್ಮಾನ

ಕುಂದಾಪುರ:ವೇದಾಭಿಮಾನಿಗಳು ಘನಪಾಠಿ ಲಕ್ಷ್ಮೀನಾರಾಯಣ ಭಟ್ ಅವರ ನೇತೃತ್ವದಲ್ಲಿ ಶೃಂಗೇರಿ ಶ್ರೀಮದ್ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಗುರುನಮನ ಕಾರ್ಯಕ್ರಮ ಶ್ರೀವಿಧುಶೇಖರ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶೃಂಗೇರಿಯಲ್ಲಿ ನಡೆಯಿತು.ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಅಗ್ನಿಹೋತ್ರಿ ವಾಸುದೇವ ಜೋಗಳೇಕರ್ ಗೋಕರ್ಣ (ಋಗ್ವೇದ),ಅಗ್ನಿಹೋತ್ರಿ ನರಸಿಂಹ ಭಟ್ ಉಮ್ಮಚಗಿ (ಯಜುರ್ವೇದ) ಹಾಗೂ ರಾಮಮೂರ್ತಿ ಶ್ರೌತಿಗಳು ವಿದ್ಯಾರಣ್ಯಪುರ ಶೃಂಗೇರಿ (ಸಾಮವೇದ) ಅವರಿಗೆ ಫಲಪುಷ್ಪ ಸಹಿತ 4.50 ಲಕ್ಷ.ರೂ ನಗದು ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕುಂದಾಪುರ ತಾಲೂಕಿನ ಹೊಸಾಡು ಶ್ರೀ ಗಣೇಶ ಕ್ರೆಡಿಟ್ ಸೊಸೈಟಿ ಅಧ್ಯಕ್ಷ […]

ಜಲಜೀವನ್ ಹೊಂಡಕ್ಕೆ ಉರುಳಿದ ಸರಕಾರಿ ಬಸ್

ಉಡುಪಿ:ಕುಂದಾಪುರ ದಿಂದ ಗಂಗೊಳ್ಳಿಗೆ ಸಾಗುತ್ತಿದ್ದ ಸರಕಾರಿ ಬಸ್ ಗುಜ್ಜಾಡಿ ಮುಖ್ಯ ರಸ್ತೆಯಲ್ಲಿ ಬೇರೊಂದು ಗಾಡಿಗೆ ಸೈಡ್ ಕೊಡುತ್ತಿದ್ದ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ಜಲ ಜೀವನ್ ಮೆಷಿನ್ ನೀರಿನ ಪೈಪ್ ಲೈನ್ ಹೊಂಡದಲ್ಲಿ ಸಿಲುಕಿದ ಘಟನೆ ಶನಿವಾರ ನಡೆದಿದೆ.ಕ್ರೈನ್ ಸಹಾಯದಿಂದ ಹೊಂಡದಲ್ಲಿ ಸಿಲುಕಿದ ಬಸ್‍ನ್ನು ಮೇಲಕ್ಕೆ ಎತ್ತಲಾಯಿತು.ಮುಳ್ಳಿಕಟ್ಟೆ ಗುಜ್ಜಾಡಿ ಮಾರ್ಗದ ಮುಖ್ಯ ರಸ್ತೆ ಬದಿಯಲ್ಲಿ ಜಲಜೀವನ್ ನೀರಿನ ಪೈಪ್ ಲೈನ್ ಹೊಂಡ ಅಪಾಯವನ್ನು ತಂದೊಡ್ಡುತ್ತಿದ್ದು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಮಟ್ಟದ ನಾಟಾ ಪ್ರವೇಶ ಪರೀಕ್ಷೆ:ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ ಜಿಲ್ಲೆಗೆ ಪ್ರಥಮ

ಕುಂದಾಪುರ:ರಾಷ್ಟ್ರೀಯ ಮಟ್ಟದಲ್ಲಿ ನಡೆದ ನಾಟಾ ಪ್ರವೇಶ ಪರೀಕ್ಷೆ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್,ಪರೀಕ್ಷೆ ಬರೆದ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ ರಾಜ್ಯಕ್ಕೆ 16ನೇ ಸ್ಥಾನ ಪಡೆದು,ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.ಕಾಲೇಜಿನ ಇನ್ನೋರ್ವ ವಿದ್ಯಾರ್ಥಿನಿ ವರ್ಣಾ ಆಚಾರ್ ರಾಜ್ಯ ಮಟ್ಟದಲ್ಲಿ 197ನೇ ಸ್ಥಾನವನ್ನು ಗಳಿಸಿದ್ದಾರೆ.ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿರುವ ವಿದ್ಯಾರ್ಥಿನಿಯರಿಬ್ಬರು ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾಗಿದ್ದಾರೆ.ರಾಜ್ಯದ ಪ್ರತಿಷ್ಠಿತ ಇಂಜಿನಿಯರ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ಅರ್ಹರಾಗಿರುತ್ತಾರೆ.ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಜನತಾ ಪದವಿ ಪೂರ್ವ ಶಿಕ್ಷಣ ಸಂಸ್ಥೆ […]

You cannot copy content of this page