ಕರಾಟೆ ತರಗತಿ ಉದ್ಘಾಟನೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿ ಯಲ್ಲಿ ಕರಾಟೆ ತರಗತಿ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಜಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿದಸಿದ್ದರು.ಸಂದೀಪ್ ಕುಂದಾಪುರ ಉದ್ಘಾಟಿಸಿದರು. ಕರಾಟೆ ಗುರುಗಳಾದ ನಟರಾಜ್,ಶಿಕ್ಷಕವೃಂದವರು ಉಪಸ್ಥಿತರಿದ್ದರು.ಶಿಕ್ಷಕಿ ಸತ್ಯವತಿ ಸ್ವಾಗತಿಸಿದರು.ಜಯಂತಿ ನಿರೂಪಿಸಿದರು.ಶ್ವೇತಾ ಮತ್ತು ಹರ್ಷಿತ ಸಹಕರಿಸಿದರು.ಸ್ವಾತಿ ವಂದಿಸಿದರು.

ಹಣವನ್ನು ಹಿಂತಿರುಗಿಸಿ ಸಾಮಾಜಿಕ ಕಾಳಜಿ ಮೆರೆದ ಧನ್ವಿ ಮರವಂತೆ

ಕುಂದಾಪುರ:ವಿಶ್ವ ಯೋಗ ಪಟು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತೆ ಬಾಲ ಪ್ರತಿಭೆಯಾಧ ಧನ್ವಿ ಮರವಂತೆ ಅವರು ಶುಕ್ರವಾರ ಮನೆಯಿಂದ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಸಿಕ್ಕಿದ್ದ ಸುಮಾರು 11,500.ರೂ ಅನ್ನು ಪೆÇಲೀಸ್ ಠಾಣೆಗೆ ಹಸ್ತಾಂತರ ಮಾಡಿ ಫಲಾನುಭವಿಗಳಿಗೆ ಮರಳಿಸುವುದರ ಮುಖೇನ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.ಬಾಲಪ್ರತಿಭೆ ಧನ್ವಿ ಮರವಂತೆ ಅವರ ಸಾಮಾಜಿಕ ಕಾಳಜಿಯನ್ನು ಪ್ರಶಂಶಿಸಿದ ಗಂಗೊಳ್ಳಿ ಪೆÇಲೀಸ್ ಠಾಣೆಯ ಪಿ.ಎಸ್.ಐ ವಿನಯ್ ಎಂ ಕೊರ್ಲಹಳ್ಳಿ ಅವರು ಅವಳ ವಿದ್ಯಾರ್ಥಿ ಜೀವನಕ್ಕೆ ಅನುಕೂಲವಾಗುವ ದೃಷ್ಟಿಯಿಂದ 13,000.ರೂ ಮೌಲ್ಯದ ಟೇಬಲ್ ಸಹಿತ […]

ಬಿಪರ್‍ಜಾಯ್ ಚಂಡಮಾರುತ ಅಬ್ಬರ,ರಸ್ತೆ ಬಿರುಕು

ಕುಂದಾಪುರ:ಬಿಪರ್‍ಜಾಯ್ ಚಂಡಮಾರುತದಿಂದ ಕಡಲಬ್ಬರ ಉಂಟಾದ ಕಾರಣ ಬೈಂದೂರು ತಾಲೂಕಿನ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿ ಫಿಷರೀಸ್ ರಸ್ತೆ ಬಿರುಕು ಬಿಟ್ಟಿದೆ.ಕಳೆದ ಬಾರಿ ಕಾಣಿಸಿಕೊಂಡಿದ್ದ ತೌಕ್ತೆ ಚಂಡಮಾರುತದ ಪ್ರಭಾವದಿಂದ ಮರವಂತೆ ಕರಾವಳಿ ಭಾಗದ ರಸ್ತೆ ಸಮುದ್ರ ಪಾಲಾಗಿತ್ತು,ಮೀನುಗಾರರು ಸ್ವತಃ ತಮ್ಮ ಖರ್ಚಿನಲ್ಲಿ ಕೆಂಪು ಮಣ್ಣನ್ನು ಹಾಕಿ ರಸ್ತೆಯನ್ನು ಪುನರ್ ನಿರ್ಮಣ ಮಾಡಿದ್ದರು ಆದರೆ ಸರಕಾರ ಯಾವುದೇ ರೀತಿ ಪರಿಹಾರದ ಕ್ರಮಗಳನ್ನು ಕೈಗೊಳ್ಳದೆ ಅಸಹಕಾರವನ್ನು ತಾಳಿತ್ತು.ಕಡಲ ತೀರದ ವಾಸಿಗಳ ರಕ್ಷಣೆಗೆ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

You cannot copy content of this page