ಹವ್ಯಾಸಿ ಯಕ್ಷಗಾನ ಕಲಾವಿದ ಲೇಖಕ ಯೋಗೀಂದ್ರ ಮರವಂತೆಗೆ ಸನ್ಮಾನ

ಕುಂದಾಪುರ:ಯಕ್ಷದ್ರುವ ಪಟ್ಲ ಫೌಂಡೇಷನ್ ವತಿಯಿಂದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಲಂಡನ್ ಮತ್ತು ಬರ್ಮಿಂಗ್ಹ್ಯಾಮ್‍ನಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಅಭಿಯಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುಕೆ ಸಂಘಟನೆಯ ಪ್ರತಿನಿಧಿ ಹವ್ಯಾಸಿ ಯಕ್ಷಗಾನ ಕಲಾವಿದ ಲೇಖಕ ಯೋಗೀಂದ್ರ ಮರವಂತೆ ಅವರನ್ನು ಭಾಗವತ ಪಟ್ಲ ಸತೀಶ ಶೆಟ್ಟಿ ಗೌರವಿಸಿದರು.

ನಾಡಕ್ಕೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ:ಸರಕಾರಿ ಮತ್ತು ಖಾಸಗಿ ಬಸ್‍ಗಳಿಗೆ ಪರ್ಮಿಟ್ ಇದ್ದರೂ ಬಹಳಷ್ಟು ಕಡೆ ಸಂಚಾರ ಮಾಡುತ್ತಿಲ್ಲ ಕಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡು ಟ್ರಿಪ್‍ಗಳನ್ನು ಓಡಿಸುತ್ತಾ ಇದ್ದಾರೆ.ಸಾರಿಗೆ ಜನರ ಮೂಲಭೂತ ವ್ಯವಸ್ಥೆಗಳಲ್ಲಿ ಪ್ರಧಾನವಾದದ್ದು ಸರಿಯಾದ ದರದಲ್ಲಿ ಮತ್ತು ಸರಿಯಾದ ಸಮಯಕ್ಕೆ ದೊರೆಯದೆ ಹೊದರೆ ಹಲವಾರು ರೀತಿಯ ಸಮಸ್ಯೆಗಳಿಗೆ ಜನರು ಒಳಗಾಗುತ್ತಾರೆ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನಿರಾಜ್ ಕಾಟಿಪಳ್ಳ ಹೇಳಿದರು.ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ವತಿಯಿಂದ ನಾಡ ಗ್ರಾಮ ಪಂಚಾಯತ್ ಎದುರುಗಡೆ ಬುಧವಾರ ಹಮ್ಮಿಕೊಂಡಿದ್ದ […]

ಯೋಗಾಚಾರ್ಯ ಸಂತೋಷಗೆ ವಿಶ್ವಮಾನ್ಯ ಯೋಗರತ್ನ ಪ್ರಶಸ್ತಿ

ಕುಂದಾಪುರ:ದೇಶ ವಿದೇಶಗಳಲ್ಲಿ ಯೋಗದ ಕಂಪನ್ನು ಬೀರಿ ಜನಜನಿತರಾಗಿರುವ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೊಳುರು ನಿವಾಸಿ ಯೋಗಾಚಾರ್ಯ ಸಂತೋಷ್ ಗೂರೂಜಿ ಅವರು ಯೋಗಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಮಾನ್ಯ ಯೋಗರತ್ನ ಪ್ರಶಸ್ತಿ-2023 ನೀಡಿ ಗೌರವಿಸಲಾಯಿತು.

You cannot copy content of this page