ರಾಜಗೋಪುರ ಪುನರ್ ನವೀಕರಣ,ಕಲಶ ಪ್ರತಿಷ್ಠೆ

ಕುಂದಾಪುರ:ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ರಾಜಗೋಪುರ ಪುನರ್ ನವೀಕರಣ ಮತ್ತು ಕಲಶ ಪ್ರತಿಷ್ಠೆ ಕಾರ್ಯಕ್ರಮ ಕೆಪಿ ಕುಮಾರ ಗುರು ತಂತ್ರಿಗಳು ಮತ್ತು ದೇವಳದ ಅರ್ಚಕರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ಶುಕ್ರವಾರ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ,ಮಹಿಳಾ ಮಂಡಳಿ ಸದಸ್ಯರು,ದೇವಸ್ಥಾನದ ದೈವ ಪಾತ್ರಿಗಳು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಕುಂದಾಪುರ:ಶ್ರೀ ಸತ್ಯಸಾಯಿ ಸೇವಾ ಸಮಿತಿ ಕುಂದಾಪುರ ವತಿಯಿಂದ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್‍ನ್ನು ವಿತರಿಸಲಾಯಿತು.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಶ್ರೀ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಆನಂದ ಉದ್ಘಾಟಿಸಿದರು.ಶ್ರೀ ಸತ್ಯಸಾಯಿ ಸಮಿತಿ ಕುಂದಾಪುರ ಸಂದೀಪ ರಾವ್ ಮತ್ತು ಸಂಚಾಲಕ ರಾಮಚಂದ್ರ.ಬಿ.ಎನ್,ದೈಹಿಕ ಶಿಕ್ಷಣ ಪರೀವಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯ ರಾಜೇಶ್ ಸ್ವಾಗತಿಸಿದರು.ದೈಹಿಕ ಶಿಕ್ಷಕ ಸಂತೋಷ ಖಾರ್ವಿ ವಂದಿಸಿದರು.ಸಹ ಶಿಕ್ಷಕಿ ಲೀಲಾ.ಜಿ ವಂದಿಸಿದರು.

ಟೀ ಡೇ ಕೆಫೆ ಪ್ರಾರಂಭೋತ್ಸವ

ಕುಂದಾಪುರ:ಬೆಂಗಳೂರು ಹೊಂಗಸಂದ್ರ ಬೊಮ್ಮನಹಳ್ಳಿಯಲ್ಲಿ ಸೊಹನ್ ಶೆಟ್ಟಿ ಮೊಳಹಳ್ಳಿ ಮತ್ತು ಡಾ.ಬಿಪಿನ್ ಶೆಟ್ಟಿ ಮೊಳಹಳ್ಳಿ ಅವರ ಪಾಲುದಾರಿಕೆಯಲ್ಲಿ ನೂತನವಾಗಿ ಆರಂಭಗೊಂಡ ಟೀ ಡೇ ಕೆಫೆ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಅವರು ಟೀ ಡೇ ಕೆಫೆಯನ್ನು ಉದ್ಘಾಟಿಸಿ ಮಾತನಾಡಿ ನವ ಉದ್ಯಮ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಟೀ ಡೇ ಕೆಫೆ ಪಾಲುದಾರರಾದ ಸೋಹನ ಶೆಟ್ಟಿ ಮೊಳಹಳ್ಳಿ,ಡಾ.ಬಿಪಿನ್ ಶೆಟ್ಟಿ ಮೊಳಹಳ್ಳಿ ಮತ್ತು ಅರ್ಚಕರು,ಅವರ ಹಿತೈಷಿಗಳು ಉಪಸ್ಥಿತರಿದ್ದರು.

You cannot copy content of this page