ಕಾಂಗ್ರೆಸ್ ಪಕ್ಷ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿದೆ-ಸಂಸದ ರಾಘವೇಂದ್ರ
ಕುಂದಾಪುರ:ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ 9 ವರ್ಷ ಪೂರೈಸಿದೆ.ಪ್ರಧಾನಿ ಹಾಗೂ ಹಿಂದಿನ ನಮ್ಮ ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ.ಕಾಂಗ್ರೆಸ್ಸಿನ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿರಬಹುದು.ಗ್ಯಾರಂಟಿಗಳನ್ನು ಜಾರಿಗೆ ತರಲು ನಾವು ಹಕ್ಕೊತ್ತಾಯ ಮಾಡುತ್ತೇವೆ.ಖಾಸಗಿ ಬಸ್‍ಗಳಿಗೂ ಸಬ್ಸಿಡಿ ನೀಡುವ ಮೂಲಕ ಅದರಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು.ಇದಕ್ಕಾಗಿ ರಾಜ್ಯವ್ಯಾಪಿ ಬಿಜೆಪಿಯಿಂದ ಜನಾಂದೋಲನ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಹೆಮ್ಮಾಡಿಯ ಜಯಶ್ರೀ ಹಾಲ್‍ನಲ್ಲಿ ಶುಕ್ರವಾರ ನಡೆದ ಬಿಜೆಪಿ ಹಿರಿಯ ಕಾರ್ಯಕರ್ತರ […]