ಕಡಲಿನ ತೆರೆಯಲ್ಲಿ ಸಿಲುಕಿದ ಕಡಲಾಮೆ ರಕ್ಷಣೆ

ಕುಂದಾಪುರ:ಕೈ,ಕಾಲು ಮುರಿತಕ್ಕೆ ಒಳಗಾಗಿ ಮರವಂತೆ ಬೀಚ್ ಬಳಿ ಕಡಲಿನ ತೆರೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಬಿಳಿ ಮೈ ಬಣ್ಣವನ್ನು ಹೊಂದಿರುವ ಬೃಹತ್ ಗಾತ್ರದ ಕಡಲಾಮೆಯನ್ನು ಜೀವ ರಕ್ಷಕ ತಂಡದ ಸದಸ್ಯರು ಕಡಲಿಗೆ ಇಳಿದು ರಕ್ಷಣೆ ಮಾಡಿ ಸಂಬಂಧಿಸಿದ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.ಮುಳುಗು ತಜ್ಞ ದಿನೇಶ್ ಖಾರ್ವಿ,ವೆಂಕಟೇಶ ಖಾರ್ವಿ,ಸಚಿನ್ ಖಾರ್ವಿ,ವಿಶ್ವನಾಥ ಖಾರ್ವಿ,ಸಚಿನ್,ಸಂತೋಷ ಖಾರ್ವಿ,ಶರತ್ ಖಾರ್ವಿ,ಆದರ್ಶ ಖಾರ್ವಿ,ಧನುಷ್ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದರು.

ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಾಗ ಬಾಲಕ ಕೆಳಗೆ ಬಿದ್ದು ಸಾವು

ಮಂಗಳೂರು:ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಪುತ್ರ,ಮುಂಡಾಜೆ ಶಾಲೆಯೊಂದರ 8 ನೇ ತರಗತಿ ವಿದ್ಯಾರ್ಥಿ ಶ್ರೀಶ (13) ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಕೆಳಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.ಮನೆಯಲ್ಲಿ ಯಾರೂ ಇಲ್ಲದ ಸಮಯ ಸೀರೆಯ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಬಾಲಕ, ಉಯ್ಯಾಲೆಯಿಂದ ಕೆಳಕ್ಕೆ ಬಿದ್ದಿದ್ದಾನೆ.ಮನೆಗೆ ಬಂದ ತಾಯಿ ಉಯ್ಯಾಲೆ ಯಿಂದ ಕೆಳಗೆ ಬಿದ್ದಿರುವ ಮಗನನ್ನು ಗಮನಿಸಿದ್ದಾರೆ.ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಮಗನನ್ನು ಕೊಂಡೊಯ್ದುದಿದ್ದಾರೆ.ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ […]

ತಿಮಿಂಗಿಲದ ಅಂಬರ್ ಗ್ರಿಸ್ ಎಂದು ಹೇಳಿ ವಂಚನೆಗೆ ಯತ್ನ:10 ಲಕ್ಷ.ರೂ ಬೇಡಿಕೆ

ಕುಂದಾಪುರ:ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಿಲದ ಅಂಬರ್ ಗ್ರಿಸ್ (ತಿಮಿಂಗಿಲದ ವಾಂತಿ) ಎಂದು ಹೇಳಿ 10.ಲಕ್ಷ.ರೂಗೆ ಸಾರ್ವಜನಿಕರಿಗೆ ಮಾರಲು ಯತ್ನಿಸಿದ ಘಟನೆ ಬೈಂದೂರು ತಾಲೂಕಿನ ಯಡ್ತರೆ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ನಿರಂಜನ್ ಎಸ್ (26),ಮಿಲನ್ ಮೊನಿಶ್ ಶೆಟ್ಟಿ (27) ಎನ್ನುವ ಯುವಕರಿಬ್ಬರು ಯಡ್ತರೆ ಹೊಸ ಬಸ್ ನಿಲ್ದಾಣದ ಬಳಿ ಸುಮಾರು 3 ಕೆ.ಜಿ 910.ಗ್ರಾಂ ತೂಕವನ್ನು ಹೊಂದಿರುವ ಹಳದಿ ಬಣ್ಣವನ್ನು ಹೊಲುವ ಮೇಣದಂತಹ ವಸ್ತುವನ್ನು ತಿಮಿಂಗಿಲದ ಅಂಬರ್ ಗ್ರಿಸ್ಎಂದು ಸುಳ್ಳು ಹೇಳಿ […]

You cannot copy content of this page