ಲಕ್ಷ್ ರಾಜೇಶ್‍ಗೆ ಬಂಗಾರದ ಪದಕ

ಕುಂದಾಪುರ:ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 28 ನೇ ಐಡಿಯಲ್ ಪ್ಲೇ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ ವಲ್ರ್ಡ್ ಸಿಟಿ ಕಪ್-2023 ಸ್ಪರ್ಧೆಯಲ್ಲಿ ಕುಂದಾಪುರ ಅಬಾಕಸ್ ಸೆಂಟರ್ ವತಿಯಿಂದ ಪ್ರತಿನಿಧಿಸಿದ್ದ ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್ ಬಂಗಾರದ ಪದಕ ಜಯಿಸಿದ್ದಾರೆ.ಅವರು ಅರಾಟೆ ರೇಷ್ಮಾ ಮತ್ತು ರಾಜೇಶ್ ದಂಪತಿ ಪುತ್ರ.19 ವಿವಿಧ ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. (ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್‍ಗೆ ಬಂಗಾರದ ಪದಕ)

ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ:ಸಿಎ ಫಲಿತಾಂಶದಲ್ಲಿ ಶ್ರೇಷ್ಠ ಸಾಧನೆ

ಕುಂದಾಪುರ:-ಸಿಎ/ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ತೆ,ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಸರಾಂತ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಜೂನ್- 2023ರಲ್ಲಿ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ವಿಶಿಷ್ಟವಾದ ರೀತಿಯಲ್ಲಿ ಸಾಧನೆಗೈದಿದ್ದಾರೆ.ಸಂಸ್ಥೆಯ ವಿದ್ಯಾರ್ಥಿಗಳಾದ ಅನ್ವಿತಾ ಎ(286),ಕೃತಿಕಾ (248),ಪೌರ್ಣಮಿ ಐತಾಳ್ (243), ಪ್ರೇಕ್ಷಿತಾ (243), ದೀಕ್ಷಿತಾ ಗೋಪಾಲ್ […]

ಹೊಸಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸಾಮಾನ್ಯ ಸಭೆ

ಕುಂದಾಪುರ:ಇಂದಿನ ಜೀವನ ಶೈಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಎದುರಾಗುತ್ತಿರುವ ಹಲವಾರು ಸವಾಲುಗಳ ನಡುವೆ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವುದರಿಂದ ಅವರ ಜೀವನ ಮಟ್ಟ ಸುಧಾರಣೆ ಜತೆಗೆ ಕುಟುಂಬ ನಿರ್ವಹಣೆ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ವಿಸ್ತಾರಣಾಧಿಕಾರಿ ವಾಸುದೇವ ಪುರಾಣಿಕ್ ಹೇಳಿದರು.ಹೊಸಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಹೊಸಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಹೊಸಾಡು ಅದರ 2022-2023 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ […]

You cannot copy content of this page