ಅಕ್ರಮವಾಗಿ ಸಾಗಿಸುತ್ತಿದ್ದ ಕೆಂಪು ಕಲ್ಲು ಸಹಿತ,ಲಾರಿ ವಶಕ್ಕೆ

ಕುಂದಪುರ:ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲನ್ನು ಸಾಗಿಸುತ್ತಿದ್ದ ಲಾರಿಯನ್ನು ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.ಗಂಗೊಳ್ಳಿ ಪೆÇಲೀಸ್ ಠಾಣೆಯ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭ ಕೆಂಪು ಕಲ್ಲನ್ನು ತುಂಬಿಕೊಂಡು ಮುಳ್ಳಿಕಟ್ಟೆ ಕಡೆಗೆ ಸಾಗಿ ಬರುತ್ತಿದ್ದ ಕಲ್ಲಿನ ಲಾರಿಯನ್ನು ತಪಾಸಣೆ ನಡೆಸಿ ಪರಿಶೀಲಿಸಿದಾಗ,ಯಾವುದೇ ರೀತಿ ಪರಾವಾನಿಗೆ ಇಲ್ಲದೆ ಕೆಂಪು ಕಲ್ಲನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಬೆಲೆ ಬಾಳುವ ರಕ್ತಚಂದನ ಮರದ ತುಂಡುಗಳು ಸಹಿತ‌,ಆರೋಪಿಗಳು ವಶಕ್ಕೆ

ಮಂಗಳೂರು:ವೇಣೂರು ವಲಯಾರಣ್ಯಧಿಕಾರಿ ನೇತೃತ್ವದ ತಂಡವು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 125 ಕೆ.ಜಿ ರಕ್ತ ಚಂದನವನ್ನು ದಾಳಿ ಮಾಡಿ ವಶಕ್ಕೆ ಪಡೆದಿದ್ದ ಘಟನೆ ವೇಣೂರು ಕರಿಮಣೇಲು ಎಂಬಲ್ಲಿ ನಡೆದಿದೆ.ಆರೋಪಿಗಳಾದ ಬಂಟ್ವಾಳ ಮಾವಿನಕಟ್ಟೆ ನಿವಾಸಿ ಖಾಲಿದ್ ಹಾಗೂ ಗುರುವಾಯನಕೆರೆ ನಿವಾಸಿ ದೀಕ್ಷಿತ್ ಅವರನ್ನು ಬಂಧಿಸಲಾಗಿದೆ.ಆರೋಪಿಗಳು ವೇಣೂರು ಕರಿಮಣೇಲು ಎಂಬಲ್ಲಿಂದ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದರು.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯಾರಣ್ಯಧಿಕಾರಿ ಮಹೀಮ್ ಜನ್ನು ನೇತೃತ್ವದ ತಂಡ ಆರೋಪಿಗಳು ಸಹಿತ 125 ಕೆ.ಜಿ. ರಕ್ತಚಂದನ ಮತ್ತು ಸಾಗಾಟಕ್ಕೆ ಬಳಸಿದ ವಾಹನ […]

ಗೋಡಂಬಿ ಸಂಸ್ಕರಣ ಉದ್ಯಮಗಳ ಬೇಡಿಕೆ ಈಡೇರಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ.

ಕುಂದಾಪುರ:ಆರ್ಥಿಕ ಸಂಕಷ್ಟದಲ್ಲಿರುವ ಕರಾವಳಿ ಭಾಗದ ಗೋಡಂಬಿ ಸಂಸ್ಕರಣಾ ಉದ್ಯಮಗಳ ಬೇಡಿಕೆ ಈಡೇರಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿ ಮಾತುಕತೆ ನಡೆಸಿದರು. ಗೋಡಂಬಿ ಸಂಸ್ಕರಣಾ ಉದ್ಯಮ ಎದುರಿಸುತ್ತಿರುವ ಎರಡೆರಡು ಇಎಂಐ ಪಾವತಿಯ ಭಾರದ ಬಗ್ಗೆ ವಿತ್ತ ಸಚಿವರ ಗಮನ ಸೆಳೆದ‌ ಸಂಸದರು.ಈ ಸಂಬಂಧ ಮಧ್ಯ ಪ್ರವೇಶಿಸಿ ಇಎಂಐ ಭಾರ ಕಡಿಮೆ ಮಾಡಲು ವಿನಂತಿಸಿದರು.ಕರಾವಳಿ ಕರ್ನಾಟಕ ಭಾಗ ಗೋಡಂಬಿ ಸಂಸ್ಕರಣಾ ಉದ್ಯಮಗಳ ಕೇಂದ್ರವಾಗಿದ್ದು, […]

You cannot copy content of this page