ಬಿಜೆಪಿಗೆ ಮತ ಹಾಕುವವರು ರಾಕ್ಷಸರು:ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ವಿವಾದಾತ್ಮಕ ಹೇಳಿಕೆ

ಬೆಂಗಳೂರು:ಹರಿಯಾಣದ ಕೈದಾಲ್‍ನಲ್ಲಿ ಭಾನುವಾರ ನಡೆದ ಜನಕ್ರೋಶ ಸಭೆಯಲ್ಲಿ ಮಾತನಾಡಿದ ಕಾಂಗ್ರಸ್ ಪಕ್ಷದ ಮುಖಂಡ ರಣದೀಪ್ ಸುರ್ಜೇವಾಲಾ ಬಿಜೆಪಿ ನಾಯಕರು,ಬಿಜೆಪಿಗೆ ಮತ ಹಾಕುವವರು ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಬಿಜೆಪಿಗೆ ಮತ ಹಾಕುವವರು ಮತ್ತು ಬಿಜೆಪಿ ಬೆಂಬಲಿಗರು ಅವರು ರಾಕ್ಷಸ ಸ್ವಭಾವದವರು.ನಾನು ಅವರನ್ನು ಇಂದು ಮಹಾಭಾರತದ ಈ ಭೂಮಿಯಿಂದ ಶಪಿಸುತ್ತೇನೆ,ಮಹಾಭಾರತ ನಡೆದ ಸ್ಥಳದಿಂದ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.ಸುರ್ಜೇವಾಲ ಅವರ ಈ ವಿವಾದಾತ್ಮಕ ವಿಡಿಯೋ ವೈರಲ್ ಆಗಿದೆ.

ಸಿದ್ದಾಪುರದ ಸೂರ,ಗಿರಿಜಾ ಪೂಜಾರಿ ದಂಪತಿಗೆ ಮೋದಿ ಆಹ್ವಾನ

ಕುಂದಾಪುರ:ಉದ್ಯೋಗ ಖಾತರಿ ಯೋಜನೆಯಡಿ ಅಮೃತ ಸರೋವರ ಯೋಜನೆಯಲ್ಲಿ ನೂರು ದಿನಕ್ಕೂ ಮಿಕ್ಕಿ ಕೆಲಸವನ್ನು ಮಾಡಿದ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಕೆಳಪೇಟೆ ಸೂರ ಪೂಜಾರಿ ಮತ್ತು ಗಿರಿಜಾ ಪೂಜಾರಿ ದಂಪತಿಗಳಿಗೆ ಆ.15 ರಂದು ದೆಹಲಿಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಹ್ವಾನವನ್ನು ನೀಡಿದ್ದಾರೆ.ದಂಪತಿಗಳು ನಾಳೆ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

ಬೈಂದೂರು:ವಿಶ್ವಹಿಂದೂ ಪರಿಷತ್ ಭಜರಂಗದಳ ಬೈಂದೂರು ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಪಂಜಿನ ಮೆರವಣಿಗೆ ಬೈಂದೂರು ಯೋಜನಾನಗರದ ನಾಗಬನದಿಂದ ಹೊರಟು ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬಳಿ ಸಂಪನ್ನಗೊಂಡಿತು. ಯೋಜನಾನಗರದ ನಾಗಬನ ಸಮಿತಿ ಅಧ್ಯಕ್ಷ ಕ್ರಷ್ಣದೇವಾಡಿಗ ಪಂಜಿನ ಮೆರವಣಿಗೆಗೆ ಚಾಲನೆಯನ್ನು ನೀಡಿದರು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌,ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ದಿಕ್ಸೂಚಿ ಭಾಷಣಕಾರರಾದ ಆದರ್ಶ ಕೆಲ,ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು, ವಿಶ್ವಹಿಂದೂಪರಿಷತ್ ಬೈಂದೂರು ಪ್ರಖಂಡ ಅಧ್ಯಕ್ಷರಾದ ಜಗದೀಶ್ […]

You cannot copy content of this page