ಮೃತಪಟ್ಟ ಸ್ಥಿತಿಯಲ್ಲಿಅಪರೂಪದ ಜಾತಿಗೆ ಸೇರಿದ ಕಡಲಾಮೆ ಪತ್ತೆ

ಕುಂದಾಪುರ:ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೈಟ್‌ಹೌಸ್ ಮಡಿ ಪರಿಸರದಲ್ಲಿ ಕಡಲ ಅಲೆಗೆ ಸಿಲುಕಿ ಮೃತಪಟ್ಟು ತೆರೆಗಳ ನಡುವೆ ತೆಲುತ್ತಿದ್ದ ಅಪರೂಪದ ಜಾತಿಗೆ ಸೇರಿದ ಕಡಲಾಮೆ ಶುಕ್ರವಾರ ಪತ್ತೆಯಾಗಿದೆ.ಮೀನುಗಾರ ನಾಗರಾಜ್ ಖಾರ್ವಿ ಸಮುದ್ರಕ್ಕೆ ಮೀನುಗಾರಿಕೆ ತೆರಳಿದ ಸಂದರ್ಭ ಅಲೆಗಳ ಮಧ್ಯೆ ಕಡಲಾಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಆಗಿದೆ.ಮೃತ ಕಡಲಾಮೆಯನ್ನು ಅವರು ತಮ್ಮ ಮರ್ಗಿ ಪಾತಿ ದೋಣಿಯಲ್ಲಿ ದಡಕ್ಕೆ ತಂದಿದ್ದರು.ಅತಿಯಾದ ವಾಸನೆಯಿಂದ ಕೂಡಿದ ಕಡಲಾಮೆಯನ್ನು ಬಳಿಕ ಸ್ಥಳೀಯರ ಸಹಕಾರದಿಂದ ಮಣ್ಣಿನಲ್ಲಿ ಹೂಳಲಾಯಿತು.ಕಡಲಾಮೆ ಸಮುದ್ರದಲ್ಲಿ ಮತ್ಸö್ಯ ಸಂಪತ್ತನ್ನು ಸಂರಕ್ಷಣೆ ಮಾಡುವುದಲ್ಲದೆ ಮೀನುಗಳು […]

ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗೆ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಉದಯ ನಾಯ್ಕ್ ಆಯ್ಕೆ

ಕುಂದಾಪುರ:ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ,ಕನಕ ಅಧ್ಯಯನ ಪೀಠ,ಚೇತನಾ ಫೌಂಡೇಶನ್ ಹುಬ್ಬಳ್ಳಿ ಅವರ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಡಾ| ಎಸ್, ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗೆ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಉದಯ ನಾಯ್ಕ್ ರವರು ಆಯ್ಕೆಯಾಗಿದ್ದಾರೆ.ಶೈಕ್ಷಣಿಕ,ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪರಿಗಣಿಸಿ ಉಪನ್ಯಾಸಕ ಉದಯ್ ನಾಯ್ಕ್ ಅವರಿಗೆ ಈ ಪ್ರಶಸ್ತಿ ದೊರೆತಿದೆ.ಉಪನ್ಯಾಸಕ ಉದಯ್ ನಾಯ್ಕ್ ಅವರಿಗೆ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದ ಶುಭಾಶಯವನ್ನು ಕೋರಿದ್ದಾರೆ.

ಅಕ್ರಮ ಮರಳು ಸಾಗಾಟ:ಮೂರು ಟಿಪ್ಪರ್ ವಶಕ್ಕೆ

ಉಡುಪಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಜರುಗಿಸಬೇಕೆನ್ನುವುದು ನಾಗರಿಕರ ಆಗ್ರಹವಾಗಿದೆ. ಗಂಗೊಳ್ಳಿ:ಯಾವುದೇ ರೀತಿ ಪರವಾನಾಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡ ಕುಂದಾಪುರ ತಾಲೂಕಿನ ಮೊವಾಡಿ ಹಾಗೂ ತ್ರಾಸಿ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಹೇರಿಕೊಂಡು ಸಾಗಾಟ ಮಾಡುತ್ತಿದ್ದ […]

You cannot copy content of this page