ಕಟ್‌ಬೇಲ್ತೂರು:ಪಾಳು ಬಾವಿಗೆ ಬಿದ್ದ ಚಿರತೆ ರಕ್ಷಣೆ

ಕುಂದಾಪುರ:ಕಟ್‌ಬೇಲ್ತೂರು ಗ್ರಾಮದ ಸುಳ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಇರುವ ಸುಳ್ಸೆ ಬಾಬು ಪೂಜಾರಿ ಎಂಬುವವರ ತೋಟದಲ್ಲಿರುವ ಆವರಣವಿಲ್ಲದ ಪಾಳು ಬಾವಿಗೆ ಬಿದ್ದ ಚಿರತೆಯನ್ನು ಶನಿವಾರ ರಕ್ಷಿಸಲಾಗಿದೆ.ಆಹಾರವನ್ನು ಹುಡುಕಿಕೊಂಡು ಜನವಸತಿ ಪ್ರದೇಶದ ಕಡೆಗೆ ಬಂದಿರುವ ಅಂದಾಜು ೩ ವರ್ಷ ಪ್ರಾಯದ ಗಂಡು ಚಿರತೆಯೊಂದು ರಾತ್ರಿ ಸಮಯದಲ್ಲಿ ಆವರಣವಿಲ್ಲದ ಪಾಳು ಬಿದ್ದ ಬಾವಿಗೆ ಬಿದ್ದಿದೆ.ಬೆಳಗಿನ ಸಮಯದಲ್ಲಿ ಪ್ರಾಣಿಯೊಂದು ಕೂಗುತ್ತಿರುವ ಶಬ್ಧವನ್ನು ಗಮನಿಸಿದ ಬಾಬು ಪೂಜಾರಿ ಅವರು ಮನೆ ಹಿಂದುಗಡೆ ಇರುವ ತೋಟದಲ್ಲಿರುವ ಬಾವಿಯನ್ನು ಇಣುಕಿ ನೋಡಿದಾಗ ಚಿರತೆ […]

ಹೆಮ್ಮಾಡಿ:ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಶುಕ್ರವಾರ ನಡೆಯಿತು.ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ದೇವಪ್ಪ ಪೂಜಾರಿ ಉದ್ಘಾಟಿಸಿ ಪೋಷಣ್ ಅಭಿಯಾನ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.ಸಮುದಾಯ ಆರೋಗ್ಯ ಕೇಂದ್ರ ಹೆಮ್ಮಾಡಿ ವೈದ್ಯರಾದ ವತ್ಸಲ,ಯೋಗ ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು.ಶಿಕ್ಷಕಿ ಸುಶೀಲ ನಿರೂಪಿಸಿದರು.ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.

ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ:ಆರೋಪಿಗಳು ವಶಕ್ಕೆ

ಕುಂದಾಪುರ:ಯಾವುದೇ ರೀತಿ ಪರವಾನಗಿ ಪಡೆಯದೆ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿ ಗಂಡ್‍ಬೇರು ಸೌಪರ್ಣಿಕಾ ನದಿಯಲ್ಲಿ ತಡರಾತ್ರಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳಾದ ಆಲ್ಟನ್ ಆನಗೋಡು(42),ಉತ್ತರ ಪ್ರದೇಶ ರಾಜ್ಯದ ನಿವಾಸಿಗಳಾದ ಮೈನೇಜರ್ (30) ಮತ್ತು ದಿನೇಶ (22)ಜಿತೇಂದ್ರ ಕುಮಾರ್ (25),ಗುದ್ದು ಕುಮಾರ (20) ಎನ್ನುವ ವ್ಯಕ್ತಿಗಳನ್ನು ಗಂಗೊಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ರಾತ್ರಿ ಸಮಯದಲ್ಲಿ ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಕ್ಲಪ್ತ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಹರೀಶ್ ಆರ್ […]

You cannot copy content of this page