ಹೆಮ್ಮಾಡಿ ಜನತಾ ಕಾಲೇಜಿನ ಕಬಡ್ಡಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ:ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಅವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕನ್ನು ಪ್ರತಿನಿಧಿಸಿದ ಹೆಮ್ಮಾಡಿ ಜನತಾ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸುವುದರೊಂದಿಗೆ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮಲ್ಪೆ:ವಿಶ್ವ ಸಮುದ್ರ ಸ್ವಚ್ಛತಾ ದಿನಾಚರಣೆ

ಉಡುಪಿ:ರೀಫ್ ವಾಚ್ ಮರೈನ್ ಕನ್ಸರ್ವೇಷನ್,ಹೆಚ್.ಸಿ. ಎಲ್ ಫೌಂಡೇಶನ್, ಅರಣ್ಯ ಇಲಾಖೆ ಮತ್ತು ಉಡುಪಿ ನಗರ ಸಭೆ,ಫಿಷರ್ಮೆನ್ ಅಸೋಸಿಯೇಷನ್ ವತಿಯಿಂದ ವಿಶ್ವ ಸಮುದ್ರ ದಿನಾಚರಣೆ ಅಂಗವಾಗಿ ಮಲ್ಪೆಯಲ್ಲಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಗರ ಪಾಲಿಕೆಯ ಆಯುಕ್ತರಾದ ರಾಯಪ್ಪ ಅವರು ಸಾಂದರ್ಭಿಕ ಕಡಲಾಮೆಯನ್ನು ಬಲೆಗಳಿಂದ ರಕ್ಷಿಸುವ ವಿನೂತನ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿ,ತಾಜ್ಯಗಳನ್ನು ಮನೆಯಲ್ಲೇ ಸುಲಭ ರೀತಿಯಲ್ಲಿ ವಿಲೇವಾರಿ ಮಾಡಬಹುದು ಎಂದರು.ಈ ವೇಳೆ ಮಾತನಾಡಿದ ನಗರ ಸಭೆಯ ಸದಸ್ಯರಾದ ಯೆಡ್ಲೀನ್ ಕರ್ಕಡ ಅವರು ಕಡಲ ತೀರದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ […]

ಉಪ್ರಳ್ಳಿ:ಹೊರೆ ಕಾಣಿಕೆ ವಾಹಾನ ಜಾಥಾಕ್ಕೆ ಚಾಲನೆ

ಕುಂದಾಪುರ:ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ಶ್ರೀಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ನೇತೃತ್ವದಲ್ಲಿ ಹಾಗೂ ವಿಶ್ವಕರ್ಮ ಸಮಾಜದ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ಹೊರೆ ಕಾಣಿಕೆ ವಾಹನ ಜಾಥಾ ಕಾರ್ಯಕ್ರಮ ತ್ರಾಸಿಯಿಂದ ನಾಗೂರು ಮಾರ್ಗವಾಗಿ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ವರೆಗೆ ಭಾನುವಾರ ನಡೆಯಿತು.ಶ್ರೀಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಆಡಳಿತ ಮೊಕ್ತೇಸರರಾದ ಚಂದ್ರಯ್ಯ ಆಚಾರ್ಯ ಕಳಿ ಅವರು ತ್ರಾಸಿಯಲ್ಲಿ ಹೊರೆ ಕಾಣಿಕೆ ವಾಹನ ಜಾಥಕ್ಕೆ ಚಾಲನೆಯನ್ನು ನೀಡಿದರು.ಮಾಜಿ ಮೊಕ್ತೇಸರ ಸುಧಾಕರ ಆಚಾರ್ಯ ತ್ರಾಸಿ,ಮಂಜುನಾಥ ಆಚಾರ್ಯ ಬಡಾಕೆರೆ,ಬಾಬು ಆಚಾರ್ಯ […]

You cannot copy content of this page