ನವೆಂಬರ್.3 ರಂದು ಜನಶಕ್ತಿ ಸಮಾವೇಶ ಆಮಂತ್ರಣ ಪತ್ರಿಕೆ ಬಿಡುಗಡೆ
ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ನವೆಂಬರ್.3 ರಂದು ನಾಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಲಿರುವ ನಾಡ (ಪಡುಕೋಣೆ) ಶಾಖೆ ಪುನರ್ ರಚನೆ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜನಶಕ್ತಿ ಸಮಾವೇಶದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಮೊವಾಡಿ ಸೇತುವೆ ಮೇಲೆ ಭಿನ್ನ ರೀತಿಯಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.ವಕೀಲರಾದ ಮಂಜುನಾಥ ಗಿಳಿಯಾರ್ ಅವರು ಆಮತಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ,ಸಂವಿಧಾನ ಬದ್ದ ಹಕ್ಕನ್ನು ಸಮುದಾಯ ಜನರಿಗೆ ಒದಗಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ನೈತಿಕ ಶ್ಥೈರ್ಯ ತುಂಬುವ […]







































































































































































































































































































































































































































































































































































































































































































































































































































































































































































































































































































































































































































































































































































































































































