ಅ.8 ರಿಂದ ಕೊಡಪಾಡಿ ಶ್ರೀ ಗುಹೇಶ್ವರ ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆ

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಾಲಯದ ಜೀರ್ಣೊದ್ಧಾರ ಪ್ರಯುಕ್ತ ಹಮ್ಮಿಕೊಂಡಿದ್ದ ಅಷ್ಟಮಂಗಳ ಪ್ರಶ್ನೆ ಚಿಂತನಾ ಕಾರ್ಯಕ್ರಮ ಅ.7,8,9 ರಂದು ನಡೆಯುವುದೆಂದು ನಿಶ್ಚಯಿಸಲಾಗಿತ್ತು.ಅನಿವಾರ್ಯ ಕಾರಣದಿಂದ ಅಷ್ಟಮಂಗಳ ಪ್ರಶ್ನೆ ಕಾರ್ಯಕ್ರಮ ಅ.8,9 ಮತ್ತು 10 ರಂದು ಕೇರಳದ ಪ್ರಸಿದ್ಧ ದೈವಜ್ಞರಾದ ನಾರಾಯಣ ನಂಬೂದಿರಿ ಕೈಮುಕ್ಕು ಹಾಗೂ ಇತರ ದೈವಜ್ಞರ ಸಹಕಾರದಲ್ಲಿ ನಡೆಯಲಿದೆ ದೇವಾಲಯದ ಸಮಿತಿ ತಿಳಿಸಿದೆ.

ಕರಾಟೆ ಸ್ಪರ್ಧೆಯಲ್ಲಿ,ಯಶವಂತ ಖಾರ್ವಿಗೆ ಪ್ರಥಮ ಸ್ಥಾನ

ಭಟ್ಕಳ:ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಬೀನಾ ವೈದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿ,ಮುಳುಗುಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಲೈಟ್‍ಹೌಸ್ ಅವರ ಮಗ ಯಶವಂತ ಖಾರ್ವಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪವರ್ ಲಿಫ್ಟಿಂಗ್ ಬೆಂಚ್ ಸ್ಪರ್ಧೆಯಲ್ಲಿ ವೈಷ್ಣವಿ ಖಾರ್ವಿಗೆ ಎರಡು ಚಿನ್ನದ ಪದಕ

ಕುಂದಾಪುರ:ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಕ್ಲಾಸಿಕ್ ಮತ್ತು ಯಕುಪ್ ಪೇಡ್ ಸ್ಪರ್ಧೆಯಲ್ಲಿ ವೈಷ್ಣವಿ ಖಾರ್ವಿ ಸಬ್ ಜೂನಿಯರ್ ವಿಭಾಗದಲ್ಲಿ 2 ಚಿನ್ನದ ಪದಕ ಜಯಿಸಿದ್ದಾರೆ.ವರುಣ ಪೂಜಾರಿ ಜೂನಿಯರ್ ವಿಭಾಗದಲ್ಲಿ 1 ಚಿನ್ನದ ಪದಕ ಹಾಗೂ ಕಾರ್ತಿಕ್ ಪೂಜಾರಿ 1 ಬೆಳ್ಳಿ ಪದಕ ಜಯಿಸಿದ್ದರು. ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಅವರು ತರಬೇತಿಯನ್ನು ನೀಡಿದ್ದರು, ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ ( ರಿ ) ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್( ರಿ) ಸಂಸ್ಥೆಯ […]

You cannot copy content of this page