ಗಂಗೊಳ್ಳಿ:ಶ್ರೀ ಶಾರದಾ ದೇವಿ ವಿಗ್ರಹ ಪ್ರತಿಷ್ಠಾಪನೆ

ಕುಂದಾಪುರ:ಸೇವಾ ಸಂಘ,ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ವತಿಯಿಂದ ನವರಾತ್ರಿ ಉತ್ಸವದ ಪ್ರಯುಕ್ತ ಆಚರಿಸಲ್ಪಡುತ್ತಿರುವ 49ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಶಾರದಾ ದೇವಿ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಶುಕ್ರವಾರ ಪ್ರತಿಷ್ಠಾಪಿಸಿ ತ್ರಿಕಾಲ ಪೂಜೆಯನ್ನು ನೆರವೇರಿಸಲಾಯಿತು.ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶಾರದಾ ದೇವಿ ವಿಗ್ರಹವನ್ನು ಅ.25 ರಂದು ಪುರಮೆರವಣಿಗೆ ಮೂಲಕ ಜಲಸ್ಥಂಭನ ಮಾಡಲಾಗುತ್ತದೆ. ಶ್ರೀ […]

ಗಂಗೊಳ್ಳಿ:ಪ್ರಾರ್ಥನಾ ಪೈಗೆ ಪ್ರಥಮ ಸ್ಥಾನ

ಕುಂದಾಪುರ:ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಜೈನ್ ಕ್ರೀಡಾ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗ ತಂಡವನ್ನು ಪ್ರತಿನಿಧಿಸಿದ್ದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಾರ್ಥನಾ ಪೈ ಪ್ರಥಮ ಸ್ಥಾನಗಳಿಸಿದ್ದಾರೆ.ಪತ್ರಕರ್ತ ಬಿ.ರಾಘವೇಂದ್ರ ಪೈ ಗಂಗೊಳ್ಳಿ ಮತ್ತು ರಾಧಿಕಾ ಆರ್.ಪೈ ದಂಪತಿಯ ಪುತ್ರಿ.

ಗೂಡ್ಸ್ ರೈಲಿಗೆ ಬೆಂಕಿ,ತಪ್ಪಿದ ಬಾರಿ ದೊಡ್ಡ ಅನಾಹುತ

ಕುಂದಾಪುರ:ತಿಂಡಿ ತಿನಿಸುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿಗೆ ಬೆಂಕಿ ತಗುಲಿದ ಪರಿಣಾಮ ವಸ್ತುಗಳು ಸುಟ್ಟು ಹೋದ ಘಟನೆ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.ಅ.9 ರಂದು ಮುಂಬೈ ಕೋಲಾಡ್ ನಿಂದ ಮಂಗಳೂರು ಸುರತ್ಕಲ್ ಕಡೆಗೆ ಲಾರಿಗಳನ್ನು ಹೊತ್ತು ಸಾಗುತ್ತಿದ್ದ ಗೂಡ್ಸ್ ರೈಲಿನಲ್ಲಿ,ಬೈಂದೂರು ತಾಲೂಕಿನ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಲಾರಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡು ಇರುವುದನ್ನು ನೋಡಿದ ಸಿಬಂದಿ ತಕ್ಷಣ ಗೂಡ್ಸ್ ರೈಲು ನಿಲ್ಲಿಸಿ ಬೆಂಕಿ ಆರಿಸಲು ಪ್ರಯತ್ನಿಸಿದ್ದರು.ಬೈಂದೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ […]

You cannot copy content of this page