ಶ್ರೀಅಯ್ಯಪ್ಪ ಸ್ವಾಮಿ ಭಕ್ತವೃಂದ ಹೊಸಾಡು

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಶ್ರೀಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಚಪ್ಪರದಲ್ಲಿ ಶ್ರೀಅಯಪ್ಪ ಸ್ವಾಮಿ ಮಾಲಾಧಾರಿಗಳ ಶಬರಿಮಲೆ ಯಾತ್ರೆ ಪ್ರಯುಕ್ತ ಗಣಹೋಮ,ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ,ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಮಂಗಳಾರತಿ,ಭಜನಾ ಕಾರ್ಯಕ್ರಮ,ಸಾರ್ವಜನಿಕ ಮಹಾ ಅನ್ನಸಂತರ್ಪಣೆ,ಯಕ್ಷಗಾನ ಕಾರ್ಯಕ್ರಮ ಗುರುವಾರ ನಡೆಯಿತು.ಡಿ.24 ರಂದು ಭಾನುವಾರ ಇರುಮುಡಿ ಕಟ್ಟುವ ಕಾರ್ಯಕ್ರಮ ಜರುಗಲಿದೆ.

ತ್ರಾಸಿ:ಡಾನ್ ಬೋಸ್ಕೊ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ

ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿ 12 ವರ್ಷಗಳ ಹಿಂದೆ ನಿರ್ಮಾಣಗೊಂಡ ತ್ರಾಸಿ ಡಾನ್ ಬೋಸ್ಕೊ ಶಾಲೆ ಶಿಕ್ಷಣ ರೂಪದಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ.ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಜತೆಗೆ ಪಠ್ಯೇತರ ಚಟುವಟಿಯಲ್ಲಿಯೂ ಭಾಗ ವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಜಯಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಡಾನ್ ಬೋಸ್ಕೊ ಶಾಲೆಯ ಪ್ರಿನ್ಸಿಪಾಲ್ ಫಾ.ಮ್ಯಾಕ್ಸಿಮ್ ಡಿಸೋಜ ಅವರು ಮಾತನಾಡಕುಂದಾಪುರ ತಾಲೂಕಿನ ತ್ರಾಸಿ ಡಾನ್ ಬೋಸ್ಕೊ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿಕ್ಷಣದ […]

ಕಾರ್ ಡಿಕ್ಕಿ:ಬೈಕ್ ಸವಾರ ಸಾವು

ಕುಂದಾಪುರ:ತಾಲೂಕಿನ ಹೆಮ್ಮಾಡಿ ಹಾಲು ಡೈರಿ ಡಿವೈಡರ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಜಯದುರ್ಗಾ ಬಸ್ ಡ್ರೈವರ್ ಮಹಾಬಲ ಅವರು ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಬಸ್ ಡ್ರೈವರ್ ಕೆಲಸವನ್ನು ನಿರ್ವಹಿಸಿ ಮಹಾಬಲ ಅವರು ಬೈಕ್‍ನಲ್ಲಿ ಹೆಮ್ಮಾಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೆಮ್ಮಾಡಿ ಹಾಲು ಡೈರಿ ಡಿವೈಡರ್ ಬಳಿ ತೋಪ್ಲು ಸಂಪರ್ಕ ರಸ್ತೆಗೆ ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಮುಳ್ಳಿಕಟ್ಟೆ ಕಡೆಯಿಂದ ಕುಂದಾಪುರಕ್ಕೆ ಕಡೆಗೆ ವೇಗವಾಗಿ ಸಾಗುತ್ತಿದ್ದ ಡಸ್ಟರ್ ಕಾರು ಡಿಕ್ಕಿ ಹೊಡೆತ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

You cannot copy content of this page