ಹೊಸಾಡು:ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಕುಂದಾಪುರ:ತಾಲೂಕಿನ ಬೈಂದೂರು ವಿಧಾನ ಸಭಾ ಕ್ಷೇತ್ರದ ಹೊಸಾಡು ಗ್ರಾಮದ ಹುಣ್ಸೆಬೆಟ್ಟಿನ ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಮುಂಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಮಕ್ಕಿ ಕ್ರಾಸ್ ನಿಂದ ಹುಣ್ಸೆಬೆಟ್ಟಿನ ಎಸ್.ಸಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸುಮಾರು 1 ಕಿ.ಮೀ ವರೆಗಿನ ಮಣ್ಣಿನ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಕಳೆದ 6 ವರ್ಷಗಳಿಂದ ಕಾಲೋನಿ ನಿವಾಸಿಗಳು ನೀಡಿರುವ ಹಲವು ಮನವಿಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದನೆ ಮಾಡದೆ ಇದ್ದಿದ್ದರಿಂದ […]

ಅರಾಟೆ:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರ:ಬೈಂದೂರು ವಲಯದ ಸರಕಾರಿ ಕಿರಿಯ ಪ್ರಾಥಮಿಕ ಅರಾಟೆ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ದೀಕ್ಷಾ ಯೂತ್ ಕ್ಲಬ್ ಮತ್ತು ರಿಂಗ್ ಫ್ರೆಂಡ್ಸ್ ಸಹಭಾಗಿತ್ವದಲ್ಲಿ ಸೋಮವಾರ ನಡೆಯಿತು.ಡಾ.ಉಮೇಶ್ ಪುತ್ರನ್,ಹೊಸಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ,ಮಂಜುನಾಥ ಅರಾಟೆ,ಎಂ.ಎಂ ಸುವರ್ಣ,ಅನಿಲ್ ಮೆಂಡನ್,ವಿಜಯ್ ಪುತ್ರನ್,ಸುಮಾ,ಮಾಲತಿ ಆಚಾರ್ಯ,ಅರುಣ್ ಆಚಾರ್ಯ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸ್ಥಳೀಯ ವಿದ್ಯಾರ್ಥಿಗಳಾದ ಆರಾಧ್ಯ.ಆರ್ ಮತ್ತು ಲಕ್ಷ ರಾಜೇಶ್ ಅವರನ್ನು ಸನ್ಮಾನಿಸಲಾಯಿತು.

ಹೆಮ್ಮಾಡಿ:ಆರ್ಯ ಬಿಲ್ಡ್ ಕೇರ್ ನೂತನ ಸಂಸ್ಥೆ ಉದ್ಘಾಟನೆ

ಬೈಂದೂರು:ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಆರ್ಯ ಬಿಲ್ಡ್ ಕೇರ್ ನೂತನ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಸೋಮವಾರ ನಡೆಯಿತು.ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವುದರ ಜತೆಗೆ ಯುವ ಜನತೆಗೆ ಉದ್ಯೋಗವಕಾಶವನ್ನು ಮಾಡಿಕೊಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ. ಎಮಿಯೆಂಟೆಕ್ ಸಿಎಂಡಿ ಸಿಜಿತ್ ಆರ್ಯ ಬಿಲ್ಡ್ ಕೇರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಸಾರ್ವಿನ್ ಪ್ಲಾಸ್ಟ್ ಎನ್ನುವುದು ಜಿಪ್ಸಮ್ ಆಗಿದ್ದು,ಮನೆ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಬಳಸ ಬಹುದಾಗಿದೆ.ಕ್ವಾಲಿಟಿ ಉತ್ತಮವಾಗಿದ್ದು ಗ್ರಾಹಕರಿಗೆ ಒಳ್ಳೆಯ ರೀತಿ ಅನುಭವನ್ನು […]

You cannot copy content of this page