ಕುಲಕಸುಬನ್ನು ವೃತ್ತಿಯನ್ನಾಗಿ ಪರಿಗಣಿಸಬೇಕು
ಕುಂದಾಪುರ:ಕುಲಕಸುಬನ್ನು ವೃತ್ತಿಯನ್ನಾಗಿ ಪರಿಗಣಿಸಿ ಕೌಶಲ್ಯವೃದ್ಧಿಯಿಂದ ಇನ್ನಷ್ಟು ಚೆಂದವಾಗಿಸುವ ಕೆಲಸ ಮಾಡಬೇಕಾಗಿದೆ ಆ ನಿಟ್ಟಿನಲ್ಲಿ ಅಗತ್ಯವಿದ್ದವರಿಗೆ ಇನ್ನಷ್ಟು ತರಬೇತಿಯನ್ನು ಇಲಾಖೆಯಿಂದ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೇಳಿದರು.ಕರ್ನಾಟಕ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉಡುಪಿ ಜಿಲ್ಲಾಡಳಿತ,ಐ.ಟಿ.ಡಿ.ಪಿ. ಉಡುಪಿ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪಡುಕೋಣೆ ಸುನೀತಾ ಅವರ ಮನೆ ವಠಾರದಲ್ಲಿ ಕಳೆದ 30 ದಿನಗಳಿಂದ ನಡೆಯುತ್ತಿರುವ ಬಿದಿರಿನ ಬುಟ್ಟಿ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಶಿಬಿರಾರ್ಥಿಗಳಿಗೆ […]