ಮರವಂತೆ:ವಾರ್ಷಿಕೋತ್ಸವ ಸಂಭ್ರಮಾಚರಣೆ,ಸನ್ಮಾನ ಕಾರ್ಯಕ್ರಮ

ಕುಂದಾಪುರ:ಯುವ ನವ ಗೆಳೆಯರ ಬಳಗ ನೀರೋಣಿ ಮರವಂತೆ ಅದರ ಮೂರನೇ ವರ್ಷದ ವಾರ್ಷಿಕೀತ್ಸವ ಸಂಭ್ರಮಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಮರವಂತೆಯಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಂಗೋಲಿ ಕಲಾವಿದೆ ಸಂಶೋಧಕರಾದ ಭಾರತಿ ಮರವಂತೆ ಉದ್ಘಾಟಿಸಿದರು,ಮಾಜಿ ತಾ.ಪಂ ಸದಸ್ಯ ಹಕ್ಕಾಡಿ ಜಗದೀಶ್ ಪೂಜಾರಿ,ಶಿಕ್ಷಕಿ ಎನ್.ಸಿಂಗಾರಿ,ಮಹಿಳಾ ಮೀನುಗಾರರ ವಿವಿಧೋದ್ಧೇಶ ಸಹಕಾರ ಸಂಘ ಮರವಂತೆ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಶ್ರೀನಿವಾಸ ಅಡಿಗ ಕಬ್ಬೈಲು,ಮರವಂತೆ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅದ್ಯಕ್ಷ ವಾಸುದೇವ ಖಾರ್ವಿ,ರವಿ ದೇವಾಡಿಗ ಉಪ್ಪಿನಕುದ್ರು,ಜ್ಯೋತಿ […]

ಕುಲಕಸುಬನ್ನು ವೃತ್ತಿಯನ್ನಾಗಿ ಪರಿಗಣಿಸಬೇಕು

ಕುಂದಾಪುರ:ಕುಲಕಸುಬನ್ನು ವೃತ್ತಿಯನ್ನಾಗಿ ಪರಿಗಣಿಸಿ ಕೌಶಲ್ಯವೃದ್ಧಿಯಿಂದ ಇನ್ನಷ್ಟು ಚೆಂದವಾಗಿಸುವ ಕೆಲಸ ಮಾಡಬೇಕಾಗಿದೆ ಆ ನಿಟ್ಟಿನಲ್ಲಿ ಅಗತ್ಯವಿದ್ದವರಿಗೆ ಇನ್ನಷ್ಟು ತರಬೇತಿಯನ್ನು ಇಲಾಖೆಯಿಂದ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೇಳಿದರು.ಕರ್ನಾಟಕ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉಡುಪಿ ಜಿಲ್ಲಾಡಳಿತ,ಐ.ಟಿ.ಡಿ.ಪಿ. ಉಡುಪಿ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪಡುಕೋಣೆ ಸುನೀತಾ ಅವರ ಮನೆ ವಠಾರದಲ್ಲಿ ಕಳೆದ 30 ದಿನಗಳಿಂದ ನಡೆಯುತ್ತಿರುವ ಬಿದಿರಿನ ಬುಟ್ಟಿ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಶಿಬಿರಾರ್ಥಿಗಳಿಗೆ […]

ಹಕ್ಲಾಡಿ:ಸಂವಿಧಾನ ಜಾಥಾ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್‍ನಲ್ಲಿ ಸಂವಿಧಾನ ಜಾಥಾ ಕಾರ್ಯಕ್ರಮ ಶುಕ್ರವಾರ ನಡೆಯಿತು.ಅಂಬೇಡ್ಕರ್ ಮತ್ತು ಗಾಂಧಿಜಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಲಾಯಿತು.ಚಂಡೆ ವಾದನ ಸಹಿತ ಪೂರ್ಣ ಕುಂಭದೊಂದಿಗೆ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿಕೊಳ್ಳಲಾಯಿತು.ಹಂಕ್ಲಾಡಿ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ದೇವಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ದಲಿತ ಸಂಘಟನೆ ಮುಖಂಡ ಉದಯ ಕೊಳೂರು ಸಂವಿಧಾನ ಪ್ರತಿಜ್ಞಾವಿಧಿ ಬೋದಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಸಂವಿಧಾನ ಮಹತ್ವ ಕುರಿತು ಮಾಹಿತಿ ನೀಡಿದರು.ಪಂಚಾಯತಿ ಸದಸ್ಯರಾದ ಚೇತನ್ ಹೆಗ್ಡೆ,ಶಾರದ,ವೀಣಾರಾಣಿ,ರಾಧ,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸತೀಶ್ […]

You cannot copy content of this page