ಮರವಂತೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ,ಮಕ್ಕಳ ಹಬ್ಬ ಕಾರ್ಯಕ್ರಮ

ಕುಂದಾಪುರ:ಮಕ್ಕಳು ತಮ್ಮ ಪೋಷಕರೊಡನೆರೊಡನೆ ಹಂಚಿಕೊಳ್ಳಲು ಸಾಧ್ಯವಾಗದ ಸಮಸ್ಯೆಗಳನ್ನು ಮಕ್ಕಳ ಗ್ರಾಮ ಸಭೆಯಲ್ಲಿ ಹಂಚಿಕೊಂಡಿದ್ದಾರೆ.ಸಾಮಾಜಿಕ ಕಳಕಳಿಯಿಂದ ಮಕ್ಕಳು ವ್ಯಕ್ತಪಡಿಸಿದ ಸಮಸ್ಯೆಗಳನ್ನು,ಅವರ ಬೇಡಿಕೆಗಳನ್ನು ನೂರಕ್ಕೆ ನೂರಷ್ಟು ಈಡೇರಿಕೆ ಮಾಡಲು ಪ್ರಯತ್ನಿಸಲಾಗುವುದು. ಮಗುವಿನ ಗ್ರಹಿಕೆಯನ್ನು ಅವರೊಳಗೆ ಅಡಗಿರುವ ಸಮಸ್ಯೆಗಳನ್ನು ಅಧ್ಯಾಯನ ಮಾಡಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರಯೋಜನಕಾರಿ ಆಗುತ್ತದೆ ಎಂದು ಬೈಂದೂರು ಕಾರ್ಯನಿರ್ವಹಣಾಧಿಕಾರಿ ಭಾರತಿ ಹೇಳಿದರು. ಕರ್ನಾಟಕ ಸರಕಾರ,ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಬೈಂದೂರು,ಗ್ರಾಮ ಪಂಚಾಯತ್ ಮರವಂತೆ ಅವರ ಸಂಯುಕ್ತ ಆಶ್ರಯದಲ್ಲಿ ಮರವಂತೆ ಕಡಲ ತೀರದಲ್ಲಿ ಮಂಗಳವಾರ ನಡೆದ ಮಕ್ಕಳ ವಿಶೇಷ […]

ಗಂಗೊಳ್ಳಿ:ಪೋಸ್ಟರ್ ಅಳವಡಿಸಿ ಪ್ರತಿಭಟನೆ

ಕುಂದಾಪುರ:ಗಂಗೊಳ್ಳಿ ಪಂಜುರ್ಲಿ ದೇವಸ್ಥಾನದ ಸಮೀಪ ಹಾದು ಹೋಗಿರುವ ಚರಂಡಿಯನ್ನು ಅಭಿವೃದ್ಧಿಗೊಳಿಸಲು ಆಗ್ರಹಿಸಿ ಗಂಗೊಳ್ಳಿ ಕಳುಹಿನ ಬಾಗಿಲು ಚರಂಡಿ ಬಳಿ ಪೋಸ್ಟರ್ ಅಳವಡಿಸಿ ಪ್ರತಿಭಟನೆಯನ್ನು ಸಾರ್ವಜನಿಕರು ಕೈಗೊಂಡಿದ್ದಾರೆ.ಈ ಸಂಬಂಧ ಸಾಮಾಜಿಕ ಜಾಲಾತಾಣಗಳಲ್ಲಿ ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಭರತನಾಟ್ಯ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹೆಮ್ಮಾಡಿ ಜನತಾ ಕಾಲೇಜಿನ ಅಲಕಾ ಹೆಬ್ಬಾರ್

ಹೆಮ್ಮಾಡಿ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ಧಾರವಾಡದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ ಪ್ರಥಮ ಸ್ಥಾನ ಪಡೆದಿರುತ್ತಾರೆ.ಪದವಿ ಪೂರ್ವ ವಿಭಾಗದಿಂದ ಭರತನಾಟ್ಯ ಸ್ಪರ್ಧೆಗೆ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದು,ಅಲಕಾ ಹೆಬ್ಬಾರ್ ಕಾಲೇಜಿನ ಸಾಂಸ್ಕೃತಿಕ ತಂಡದ ಉದಯೋನ್ಮುಖ ಪ್ರತಿಭೆ ಇದುವರೆಗೆ ನಡೆದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನ ಮಾಡಿರುತ್ತಾಳೆ ಹಾಗೂ ಸಾಕಷ್ಟು ಬಹುಮಾನಗಳನ್ನು ಪಡೆದಿರುತ್ತಾಳೆ.ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, […]

You cannot copy content of this page