ಅವೈಜ್ಞಾನಿಕ ಬುಲ್ಟ್ರೋಲ್,ಲೈಟ್ ಫಿಶಿಂಗ್ ನಿಷೇಧದ ಅನುಷ್ಠಾನ ಮಾಡುವಂತೆ ಆಗ್ರಹ,ಮೀನುಗಾರರಿಂದ ಹೆದ್ದಾರಿ ತಡೆ

ಕುಂದಾಪುರ:ಬುಲ್ಟ್ರೋಲ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಳೆದ ಹತ್ತು ವರ್ಷಗಳಿಂದ ಸರಕಾರದ ಮುಂದೆ ಬೇಡಿಕೆಗಳನ್ನು ಇಡುತ್ತಾ ಬರಲಾಗುತ್ತಿದ್ದರೂ.ಬಂಡವಾಳ ಶಾಹಿಗಳ ಲಾಬಿಗೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಳಗಾಗಿದ್ದರಿಂದ ನಮ್ಮ ಜತೆ ಚೆಲ್ಲಾಟ ಆಡುತ್ತಿದ್ದಾರೆ.ಕೋರ್ಟ್‍ನ ಆದೇಶದ ವಿರುದ್ಧವಾಗಿ ಅವೈಜ್ಞಾನಿಕ ಮೀನುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು.ಇಲ್ಲಿ ತನಕ ನಮಗೆ ನ್ಯಾಯ ಸಿಕ್ಕಿಲ್ಲ.ಕಡಲಿನಲ್ಲಿ ಮತ್ಸ್ಯಸಂಪತ್ತು ನಾಶವಾಗುವ ಹಂತಕ್ಕೆ ಬಂದು ತಲುಪಿದ್ದು.ಅವೈಜ್ಞಾನಿಕ ಮೀನುಗಾರಿಕೆ ನಿಷೇಧಕ್ಕೆ ಮುಂದಿನ ಹತ್ತು ದಿನಗಳ ಒಳಗೆ ಪರಿಣಾಮಕಾರಿಯಾದ ನಿಲುವನ್ನು ಕೈಗೊಳ್ಳದೆ ಹೋದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ […]

ಮಂಗಳೂರಿನಲ್ಲಿ ಭಾರಿ ಮಳೆ,ಕೃತಕ ನೆರೆ ಸೃಷ್ಟಿ,ವ್ಯಾಪಕ ಹಾನಿ‌

ಮಂಗಳೂರು:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.ಹವಾಮಾನ ವೈಪರಿತ್ಯ ದಿಂದಾಗಿ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಜಿಲ್ಲೆಯ ಜನತೆ ತತ್ತರಿಸುವಂತಾಗಿದೆ. ಗುಡುಗು,ಸಿಡಿಲು ಸಹಿತ ಮಳೆ ಧಾರಾಕಾರವಾಗಿ ಸುರಿದಿದ್ದು, ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.ಗಾಳಿಮಳೆಗೆ ಹಲವು ಮರಗಳು ಧರೆಗುರುಳಿವೆ.ಮಳೆಯ ಅಬ್ಬರ ಜೋರಿರುವುದರಿಂದ ಡಿ. 3 ರಂದು ಜಿಲ್ಲೆಯಲ್ಲಿ ಶಾಲಾ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಡಳಿತಸೂಚಿಸಿದೆ.ಟಿಪ್ಪು ಸುರತ್ಕಲ್ ಮಾರುಕಟ್ಟೆ ಬಳಿಯ ವೀನಸ್ ಅಸ್ಪತ್ರೆಗೆ ಪ್ರವೇಶಿಸಿದ‌ ನೆರೆ ನೀರಿನಿಂದಾಗಿ,ರೋಗಿಗಳ ಪರದಾಟ ಮಾಡುವಂತ್ತಾಯಿತು.

ಬೈಂದೂರು:ಗ್ಲ್ಯಾಮ್ ರೂಮ್ (ಅಕಾಡೆಮಿ) ಬ್ಯೂಟಿ ಪಾರ್ಲರ್ ಅರ್ಪಿಸುತ್ತಿದೆ ದೀಪಾವಳಿ 50% ಆಫರ್

ಕುಂದಾಪುರ:ಗ್ಲ್ಯಾಮ್ ರೂಮ್ ಬ್ಯೂಟಿ ಪಾರ್ಲರ್ ತಮ್ಮ ನೆಚ್ಚಿನ ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಪಿಸುತ್ತಿದೆ 50% ಆಫರ್.ನೀವು ಇಚ್ಚಿಸುವ ಯಾವುದೇ ರೀತಿಯ ಹೇರ್ ಕೇರ್,ಸ್ಕಿನ್ ಕೇರ್,ನೈಲ್ ಆರ್ಟ್,ಬ್ರೈಡಲ್ ಮೇಕಪ್ ಹಾಗೂ ಎಲ್ಲಾ ರೀತಿಯ ಸರ್ವಿಸ್‍ಗಳು ದೊರೆಯಲಿದೆ.ಇವೊಂದು ದೀಪಾವಳಿ ಹಬ್ಬದ ಆಫರ್ ಕೇವಲ ನವೆಂಬರ್ 3 ರ ತನಕ ಮಾತ್ರ ಗ್ರಾಹಕರೆ ಇನ್ನೇಕೆ ತಡ ಒಮ್ಮೆ ನೀವು ಬೈಂದೂರು ಹೊಸ ಬಸ್ ನಿಲ್ದಾಣದ ಹತ್ತಿರ ವಿರುವ ಆಶೀರ್ವಾದ ಬಿಲ್ಡಿಂಗ್‍ನಲ್ಲಿರುವ ಗ್ಲ್ಯಾಮ್ ರೂಮ್ ಪಾರ್ಲರ್‍ಗೆ ಒಮ್ಮೆ ಭೇಟಿ ನೀಡಿ.ದೀಪಾವಳಿ ಹಬ್ಬದ […]

You cannot copy content of this page