ಶ್ರೀದುರ್ಗಾ ಸಂಜೀವಿನಿ ಚಿಕ್ಕಿ ಘಟಕ ಉದ್ಘಾಟನೆ
ಕುಂದಾಪುರ:ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಂಜೀವಿನಿ ಸಂಘಗಳು ಬಹಳಷ್ಟು ಪ್ರಯೋಜನಾಕಾರಿ ಆಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಕುಂದಾಪುರ ತಾಲೂಕಿನ ಗುಜ್ಜಾಡಿ ಸಂಜೀವಿನಿ ಒಕ್ಕೂಟದ ಸದಸ್ಯೆ ಕವಿತಾ ಗಾಣಿಗ ಅವರು ಕೊಡಪಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀದುರ್ಗಾ ಸಂಜೀವಿನಿ ಚಿಕ್ಕಿ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಬೈಂದೂರು ಬಿ.ಒ ನಾಗೇಶ್ ನಾಯ್ಕ್,ಕುಂದಾಪುರ ತಾಲೂಕು ಪಂಚಾಯತ್ ಮ್ಯಾನೇಜರ್ ರಾಮಚಂದ್ರಮಯ್ಯ,ಎನ್‍ಆರ್‍ಎಲ್‍ಎಂ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಮತ್ತು ತಾಲೂಕು ವ್ಯವಸ್ಥಾಪಕ ಯತೀಶ್,ಮ್ಯಾನೇಜರ್ […]