ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ
ಕುಂದಾಪುರ:ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ,ಲಕ್ಷಮೋದಕ ಹೋಮ,ಶತ ಚಂಡಿಯಾಗ,2016 ಕಾಯಿ ಗಣಹೋಮ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾರ್ಚ್ 13 ರಿಂದ ಮಾರ್ಚ್ 17 ರ ತನಕ ನಡೆಯಲಿದೆ. ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಧರ್ಮದರ್ಶಿಗಳಾದ ಹೆಚ್.ಬಾಲಚಂದ್ರ ಭಟ್ಟ ಅವರು ಮಾತನಾಡಿ,ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ ಮತ್ತು ಬಹ್ರಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮದ ಕುರಿತು ವಿವರಣೆಯನ್ನು ನೀಡಿದರು. ದಿನಾಂಕ 13 ರಂದು ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ […]