ಗುಡ್ಡಮ್ಮಾಡಿ:ಭೋಜನಾಲಾಯ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಕುಂದಾಪುರ:ತಾಲೂಕಿನ ಪ್ರಸಿದ್ಧ ಸೇನಾಪುರ ಗ್ರಾಮದ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಭೋಜನಾಲಯ ನಿರ್ಮಾಣಕ್ಕೆ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಅರುಣ ಕುಮಾರ್ ಶೆಟ್ಟಿ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.ಗುತ್ತಿಗೆದಾರ ಸತೀಶ ಶೆಟ್ಟಿ ಯಳೂರು,ಸ್ಥಳೀಯರು ಉಪಸ್ಥಿತರಿದ್ದರು.ದೇವಸ್ಥಾನದ ಅರ್ಚಕರಾದ ನಾಗೇಂದ್ರ ಭಟ್ ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.

ತ್ರಾಸಿ:ಬ್ರಹ್ಮಕಲಶೋತ್ಸವದ ವೈದಿಕ ವಿಧಾನ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಶ್ರೀರಾಮ,ಶ್ರೀಗಣಪತಿ,ಶ್ರೀಅಯ್ಯಪ್ಪ ಸ್ವಾಮಿ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಕಲಶೋತ್ಸವದ ವೈದಿಕ ವಿಧಾನ ಮತ್ತು ಧಾರ್ಮಿಕ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನದೊಂದಿಗೆ ಗುರುವಾರ ಪುರೋಹಿತರ ನೇತೃತ್ವದಲ್ಲಿ ನಡೆಯಿತು.ಬ್ರಹ್ಮಕಲಶೋತ್ಸವದ ವೈದಿಕ ವಿಧಾನ ಮತ್ತು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದೇವತಾ ಪ್ರಾರ್ಥನರ,ನವಗ್ರಹ ಹೋಮ ಸಹಿತಿ ಗುರುಗನಪತಿ ಪೂಜೆ,ಸ್ಥಾನ ಶುದ್ಧಿ,ಪ್ರಾಸಾದ ಶುದ್ಧಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜೆ,ಬಲಿ,ಶಕ್ತಿ ಹೋಮ ಜರುಗಿತು.ಶ್ರೀರಾಮ,ಶ್ರೀಗಣಪತಿ,ಶ್ರೀಅಯ್ಯಪ್ಪ ಸ್ವಾಮಿ ದೇವರ ಅಷ್ಟಬಂಧ ಬಹ್ಮಕಲಶಾಭಿಷೇಕ ಏಪ್ರಿಲ್ 05 ರ ಶುಕ್ರವಾರ ದಂದು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ.ಮಧ್ಯಾಹ್ನ ಅನ್ನಸಂತರ್ಪಣೆ,ಸಾಂಸ್ಕ್ರತಿಕ […]

ಏಪ್ರಿಲ್ 14 ರಂದು ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ಪ್ರಸಿದ್ಧ ಕನ್ಯಾನ ಗ್ರಾಮದ ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದ ಶ್ರೀನಾಗ ಸನ್ನಿಧಿಯಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏಪ್ರಿಲ್.14 ರಂದು ಭಾನುವಾರ ನಡೆಯಲಿದೆ.ಶ್ರೀನಾಗ ದೇವರ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 10 ರಂದು ಬುಧವಾರ ಸರ್ಪ ಸಂಸ್ಕಾರ ಕ್ರಿಯಾರಂಭ ಆರಂಭವಾಗಲಿದೆ.ಏಪ್ರಿಲ್ 10 ರ ಬುಧವಾರ ದಿಂದ ಏಪ್ರಿಲ್ 13 ರ ಶನಿವಾರದ ವರೆಗೆ ಶಾಖ ಋಕ್ಸಂಹಿತಾ ಯಾಗವು ನಾಗ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಜರುಗಲಿದೆ.ಏಪ್ರಿಲ್ […]

You cannot copy content of this page