ಏಕ ಪವಿತ್ರ ನಾಗಮಂಡಲೋತ್ಸವ ಸಂಪನ್ನ
ಕುಂದಾಪುರ:ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ವತಿಯಿಂದ ಕುಟುಂಬದ ಆದಿ ಬನದಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ಸಂಪನ್ನಗೊಂಡಿತು.ಶ್ರೀನಾಗ ದೇವರ ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸೇವೆ ಜರುಗಿತು.ಸಂಜೆ ದೀಪಾರಾಧನೆ,ಹಾಲಿಟ್ಟು ಸೇವೆ, ಸಂದರ್ಶನ,ಪ್ರಸಾದ ವಿತರಣೆ,ಮಂಗಲ ಪುಣ್ಯಾಹ್ನ, ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.ಸಾವಿರಾರು ಜನರು ಆಗಮಿಸಿ ಶ್ರೀ ನಾಗದೇವರ ದರ್ಶನವನ್ನು ಪಡೆದರು.ವಾದ್ಯ ಘೋಷದೊಂದಿಗೆ ನಾಗ ಪಾತ್ರಿಗಳನ್ನು ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು.ಶಾನ್ಕಟ್ಟು ಕೆಳಗಿನ ಮನೆ ಚಂದ್ರಹಾಸ ಶೆಟ್ಟಿ ಮಾತನಾಡಿ, […]