ಮತ್ಸ್ಯ ಸಂಪತ್ತು ಸಂವೃದ್ಧಿಗಾಗಿ ಸಮುದ್ರ ಪೂಜೆ

ಕುಂದಾಪುರ:ಪರ್ಸಿನ್ ಬೋಟ್,ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್‍ಗಳ ಸಂಘದ ವತಿಯಿಂದ ಸಮುದ್ರಪೂಜೆ ಬುಧವಾರ ಗಂಗೊಳ್ಳಿಯಲ್ಲಿ ನಡೆಯಿತು.ಮತ್ಸ್ಯ ಸಂಪತ್ತು ವೃದ್ಧಿಗಾಗಿ ಹಾಗೂ ಮೀನುಗಾರಿಕೆಗೆ ಯಾವುದೆ ರೀತಿ ಅಡ್ಡಿ ಆತಂಕಗಳು ಎದುರಾಗದಿರಲಿ ಎಂದು ಸಮುದ್ರರಾಜನಿಗೆ ಹಾಲು,ಸೀಯಾಳ,ಫಲಪುಷ್ಪವನ್ನು ಅರ್ಪಿಸಿ ಮೀನುಗಾರರು ಪ್ರಾರ್ಥನೆಯನ್ನು ಸಲ್ಲಿಸಿದರು.ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಪ್ರಭಾಕರ ಕುಂದರ್, ತ್ರಿಸೆವೆಂಟಿ ಬೋಟ್ ಸಂಘದ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ,ಟ್ರಾಲ್‍ಬೋಟ್ ಸಂಘದ ಅಧ್ಯಕ್ಷ ಗಣೇಶ್ ಖಾರ್ವಿ,ಮೀನುಗಾರರ ಮುಖಂಡರು,ಮೀನುಗಾರರು ಉಪಸ್ಥಿತರಿದ್ದರು.ಅರ್ಚಕ ವೇದ ಮೂರ್ತಿ ವಿಟ್ಠಲ್‍ದಾಸ್ ಭಟ್ ಹಾಗೂ ಅಜಿತ್ ಭಟ್ ಧಾರ್ಮಿಕ […]

ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಶಯದೇವಿಸುತೆ ಮರವಂತೆ ಆಯ್ಕೆ

ಕುಂದಾಪುರ:ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್ ಸ್ವರೂಪ್) ಅವರು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ನೂತನ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ,ಯಕ್ಷಗಾನ ಕ್ಷೇತ್ರದಲ್ಲಿ,ವಿವಿಧ ಪತ್ರಿಕೋದ್ಯಮ ಹಾಗೂ, ಹಲವಾರು ಮಾಧ್ಯಮ ವಾಹಿನಿಗಳಲ್ಲಿ ಸತತ ಸೇವೆಗೈಯ್ಧಿರುವಂತಹಇವರ ಕಲಾಪ್ರತಿಭೆಯ ನಿರಂತರ ಸೇವೆಗೆ ಅಕ್ಕಮಹಾದೇವಿ ಪ್ರಶಸ್ತಿ,ಹುಟ್ಟೂರ ಸಾಧಕ ಸಂಮ್ಮಾನ ಪ್ರಶಸ್ತಿ,ಮಹಿಳಾ ಸಾಧಕಿ ಪ್ರಶಸ್ತಿ,ರಂಗಸ್ಥಳ ರತ್ನ ಪ್ರಶಸ್ತಿ,ಕುಂದಶ್ರೀ ಪ್ರಶಸ್ತಿ, ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ,ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ,ಸ್ಟೇಟ್ ಲೆವೆಲ್ ಅವಾರ್ಡ್,ಡಾ. ಜಿ.ಡಿ. ಜೋಶಿ ಗೌರವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ […]

ಹೊಸಾಡು:ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿ

ಕುಂದಾಪುರ:ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಾಳುಮನೆ ಕಾಳಮ್ಮ ಎಂಬುವವರ ಮನೆ ಮಾಡಿನ ಮೇಲೆ ಅಡಿಕೆ ಮರ ಬಿದ್ದು ಸಿಮೆಂಟ್ ಸೀಟ್,ಪಕಾಸಿ,ಹೆಂಚು,ಡಿಟಿಎಚ್ ತುಂಡಾಗಿದೆ.ಘಟನೆಯಲಿ ಅಂದಾಜು 15 ಸಾವಿರ.ರೂ ನಷ್ಟ ಉಂಟಾಗಿದೆ.ಹೊಸಾಡು ವಿ.ಎ ಮತ್ತು ಉಗ್ರಾಣಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

You cannot copy content of this page