ಶ್ರೀ ಮೂಕಾಂಬಿಕೆ ಸನ್ನಿಧಿಯಲ್ಲಿ ನೃತ್ಯ ಕಲೋತ್ಸವ ಕಾರ್ಯಕ್ರಮ
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಸ್ವರ್ಣಮುಖಿ ರಂಗ ಮಂದಿರದಲ್ಲಿ ಭರತನಾಟ್ಯ ದಿವ್ಯೋತ್ಸವ-ನೃತ್ಯಕಲೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಗುರುವಾರ ನಡೆಯಿತು.ದೇಗುಲದ ಪವಿತ್ರ ವಾತಾವರಣದ ಮಧ್ಯೆ,ವಿವಿಧ ಭಾಗಗಳಿಂದ ಬಂದ 20ಕ್ಕೂ ಹೆಚ್ಚು ಯುವ ಕಲಾವಿದರು ಭರತನಾಟ್ಯವನ್ನು ಭಕ್ತಿ,ಶಿಸ್ತು ಮತ್ತು ನೃತ್ಯಶೈಲಿಯೊಂದಿಗೆ ಪ್ರಸ್ತುತಪಡಿಸಿದರು.ದರ್ಶನಾರ್ಥಿಗಳು,ಪಾಲಕರು ಮತ್ತು ಕಲೆ ಪ್ರೇಮಿಗಳು ವೇದಿಕೆಯಲ್ಲಿ ಆಕರ್ಷಕ ಪ್ರದರ್ಶನಗಳಿಂದ ಮೋಹಿತರಾದರು.ರೇವತಿ ಶ್ರೀನಿವಾಸನ್ ಲಾಲಿತ್ಯಭರಿತ ನಿರೂಪಣೆಯಿಂದ ಕಾರ್ಯಕ್ರಮ ನಡೆಸಿಕೊಟ್ಟರು.ನೃತ್ಯ ಬಿಂಬ ಪ್ರತಿಷ್ಠಾನ […]



























































































































































































































































































































































































































































































































































































































































































































































































































































































































































































































































































































































































































































































































































































































































































