ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ

ಕುಂದಾಪುರ:ಕರಾವಳಿ ಮಿತ್ರ ಮಂಡಳಿ ಮರವಂತೆ ಅದರ 25ನೇ ವಾರ್ಷಿಕೋತ್ಸವ ಅಂಗವಾಗಿ ಮರವಂತೆಯಲ್ಲಿ ಎರಡು ದಿನಗಳ ಕಾಲ ನಡೆದ ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸುರೇಶ್ ಖಾರ್ವಿ,ಕಾರ್ಯದರ್ಶಿ ಈಶ್ವರ ಖಾರ್ವಿ ಹಾಗೂ ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ,ಪಿ ಚಂದ್ರ ಖಾರ್ವಿ ಮತ್ತು ಪ್ರೆÇೀತ್ಸಾಹಕರಾದ ಡಾ.ನಾಗರಾಜ ಖಾರ್ವಿ,ಚಾವನ ಆನಂದ ಖಾರ್ವಿ,ಕರಾವಳಿ ಮಿತ್ರ ಮಂಡಳಿ ಮರವಂತೆ […]

ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್,ನವ ಭಾರತ್ ಟಿಂಬರ್ಸ್ ಕುಂದಾಪುರದಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ಸಂಗಮ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್,ನವಭಾರತ್ ಟಿಂಬರ್ಸ್ ಅದರ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.ಕಳೆದ ಎಂಟು ವರ್ಷಗಳಿಂದ ಆಫ್ರಿಕಾ ದೇಶದಲ್ಲಿ ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಮರದ ಉದ್ಯಮವನ್ನು ಮಾಡುತ್ತಿರುವ ಅಪೇಕ್ಸ್ ಸಂಸ್ಥೆ ಬಹಳಷ್ಟು ಅನುಭವವನ್ನು ಹೊಂದಿದೆ.ಅದರ ಸಹ ಸಂಸ್ಥೆಯಾದ ನವಭಾರತ್ ಟಿಂಬರ್ಸ್ ಕುಂದಾಪುರದಲ್ಲಿ ಆರಂಭಗೊಂಡಿದೆ. ಕಟ್ಟಡ,ದೇವಸ್ಥಾನ,ಫರ್ನಿಚರ್,ಇಂಟೀರಿಯರ್‍ಗೆ ಬೇಕಾಗುವ ಎಲ್ಲಾ ರೀತಿಯ ಗುಣಮಟ್ಟದ ರೆಡಿ ಸೈಜ್,ಕಟ್ ಸೈಜ್ ಮರಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ.ಇಲ್ಲಿ ಇಂಪಾರ್ಟೆಂಟ್ ಟಿಕ್ಸ್,ಸಾಗುವಾನಿ,ಕಲ್ಲಂಬೋಗಿ,ಅಕೇಶೀಯಾ,ಬೋಗಿ,ಹಲಸು,ಹುಣಾಲ್,ಮಹಾಗನಿ,ಹೆಬ್ಬೆಲಸು ನಂತಹ ಉತ್ತಮ […]

ಮಾಟುಬಲೆ ದೋಣಿ ಮೀನುಗಾರರ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಕುಂದಾಪುರ:ಕರಾವಳಿ ಮಿತ್ರ ಮಂಡಳಿ ಮರವಂತೆ ಅದರ 25ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಾವುಂದ ವ್ಯಾಪ್ತಿಯ ಮಾಟುಬಲೆ ದೋಣಿ ಮೀನುಗಾರರ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ಮರವಂತೆಯಲ್ಲಿ ಶನಿವಾರ ನಡೆಯಿತು. ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಮರವಂತೆ ಅಧ್ಯಕ್ಷ ವಾಸುದೇವ ಖಾರ್ವಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಮೀನುಗಾರಿಕೆ ಜತೆಗೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದದ ಮನಸು ಚೇತನ್ಯ ಭರಿತವಾಗಿರುತ್ತದೆ.ಮೀನುಗಾರಿಕೆಯಲ್ಲಿ ಜೀವನವನ್ನು ಕಂಡುಕೊಂಡಿರುವ ಮೀನುಗಾರರ ಮಕ್ಕಳು ಶಿಕ್ಷಣವಂತರಾಗಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು. […]

You cannot copy content of this page