ಎಂಟು ವರ್ಷದ ಬಳಿಕ ತವರಿಗೆ ಮರಳಿದ ಜಿಂಕು

ಉಡುಪಿ:ಕಳೆದ ನಾಲ್ಕು ತಿಂಗಳ ಹಿಂದೆ ಕುಂದಾಪುರ ತಾಲೂಕಿನ ತ್ರಾಸಿ,ಮುಳ್ಳಿಕಟ್ಟೆ ಪರಿಸರದಲ್ಲಿ ಅಡ್ಡಾಡುತ್ತಿದ್ದ ಉತ್ತರ ಪ್ರದೇಶದ ಮೆಹದಾವಲ್ ಜಿಲ್ಲೆ ನಿವಾಸಿ ಮಾನಸಿಕ ಅಸ್ವಸ್ಥ ಜಿಂಕು (ಸುನಿಲ್) ಎಂಬಾತ ಯುವಕ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖ ಗೊಂಡು ಎಂಟು ವರ್ಷದ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ.ಘಟನೆ ವಿವರ:ಜನವರಿ.25 ರಂದು ತ್ರಾಸಿ ಬೀಚ್ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಹರಿದ ಬಟ್ಟೆ ಧರಿಸಿದ ಮಾನಸಿಕ ಅಸ್ವಸ್ಥನೊಬ್ಬನು ನಡೆದು ಕೊಂಡು […]

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಜನ್ಮದಿನಾಚರಣೆ,ಸಮೃದ್ಧ ಹಸಿರು ಕಾರ್ಯಕ್ರಮ

ಕುಂದಾಪುರ:ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಜನುಮದಿನ ಅಂಗವಾಗಿ ಅವರ ಅಭಿಮಾನಿಗಳ ಬಳಗದ ವತಿಯಿಂದ ಕ್ಷೇತ್ರದಾದ್ಯಂತ ಸಮೃದ್ಧ ಹಸಿರು ಕಾರ್ಯಕ್ರಮ ಭಾನುವಾರ ನಡೆಯಿತು.ಸಮೃದ್ಧ ಹಸಿರು ಕಾರ್ಯಕ್ರಮದ ಅಂಗವಾಗಿ ಶಾಸಕರ ಅಭಿಮಾನಿಗಳು ನೂರಾರು ಗಿಡಗಳನ್ನು ನೆಟ್ಟು ಪರಿಸರ ಮೇಲಿನ ಕಾಳಜಿ ಮೆರೆದರು.ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕ್ಷೇತ್ರದ ಹಲವೆಡೆರಕ್ತದಾನ ಶಿಬಿರ,ಸ್ವಚ್ಛತಾ ಕಾರ್ಯಕ್ರಮ,ಗಿಡ ನೆಡುವ ಕಾರ್ಯಕ್ರಮ,ಅಸಾಯಕರಿಗೆ ನೆರವು,ವ್ರದ್ಧಾಶ್ರಮ, ಅನಾಥಶ್ರಮ ಗಳಿಗೆ ನೆರವು ನೀಡುವುದಲ್ಲದೆ ಹಳ್ಳಿಗಳಲ್ಲಿ ದುರಸ್ಥಿಯಲ್ಲಿರುವ ಮನೆಗಳನ್ನು ಸರಿಪಡಿಸಿಕೊಡುವ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಮೇಲ್ಚಾವಣಿ ಸರಿದೂಗಿಸುವ ಕಾರ್ಯಗಳನ್ನು […]

ಕುಡಿಯುವ ನೀರಿಗಾಗಿ ಹರಸಾಹಸ

ಬೈಂದೂರು:ತೀವೃ ಸ್ವರೂಪದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಡವು ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಆಳದ ಬಾವಿ ಕಟ್ಟೆ ಮೇಲೆ ನಿಂತು ಹರ ಸಾಹಸಪಟ್ಟು ನೀರನ್ನು ಸೇದುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ.ಮಹಿಳೆಯರ ಜೀವದ ಸುರಕ್ಷತೆ ದೃಷ್ಟಿಯಿಂದ ಸಂಬಂಧಿಸಿದ ಇಲಾಖೆ ಮತ್ತು ಸ್ಥಳೀಯ ಗ್ರಾಪ ಪಂಚಾಯಿತಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

You cannot copy content of this page