ತೆಂಗಿನ ತೋಟಕ್ಕೆ ವಿಶೇಷ ರೋಗ ಭಾಧೆ,ಜಿಲ್ಲಾ ರೈತ ಸಂಘ ಭೇಟಿ

ಕುಂದಾಪುರ:ವಿಶೇಷ ರೋಗ ಭಾಧೆಗೆ ತುತ್ತಾಗಿರುವ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕನ್ನಡ ಕುದ್ರು ಮತ್ತು ಮುವತ್ತು ಮುಡಿ ಭಾಗದ ತೆಂಗಿನ ತೋಟಕ್ಕೆ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರುಗಳು ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವಿಜ್ಞಾನಿಗಳು ಮತ್ತು ರೈತರೊಂದಿಗೆ ಮಾತುಕತೆ ನಡೆಸಿದರು.ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪ ಶೆಟ್ಟಿ,ತ್ರಾಸಿ ವಲಯ ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ,ಕಂಬದಕೋಣೆ ರೈತ ಸಂಘದ ಅಧ್ಯಕ್ಷ ಪ್ರತಾಪಶ್ಚಂದ್ರ ಶೆಟ್ಟಿ,ಕಿಶನ್ ಹೆಗ್ಡೆ ಮೊಳಹಳ್ಳಿ,ವಡಂಬಳ್ಳಿ ಜಯರಾಮ ಶೆಟ್ಟಿ,ವಂಡ್ಸೆ […]

ಜಲ ಜೀವನ್ ನೀರಿನ ಪೈಪ್ ಲೈನ್ ಅವಾಂತರ

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಪಕ್ಕದಲ್ಲಿ ಹಾದು ಹೋಗಿರುವ ಜಲ ಜೀವನ್ ಮಿಷನ್ ನೀರಿನ ಪೈಪ್ ಲೈನ್‍ನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇದ್ದಿದ್ದರಿಂದ ಹೊಂಡದಲ್ಲಿ ವಾಹನಗಳು ಸಿಲುಕಿ ಕೊಂಡು ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಅಂಗಡಿ ಮುಂಗಟ್ಟುಗಳ ಎದುರುಗಡೆ ನೀರಿನ ಪೈಪ್ ಲೈನ್ ಹೊಂಡವನ್ನು ತೆಗೆದಿದ್ದು ಸಮಪರ್ಕವಾದ ರೀತಿಯಲ್ಲಿ ಹೊಂಡಕ್ಕೆ ಮಣ್ಣನ್ನು ಹಾಕದೆ ಹಾಗೆ ಬಿಡಲಾಗಿದೆ.ಮಳೆ ನೀರು ಹೊಂಡದಲ್ಲಿ ತುಂಬಿಕೊಂಡಿದ್ದು ಹೊಂಡದಲ್ಲಿನ ಮಣ್ಣು ಮೃದುವಾಗಿದ್ದರಿಂದ ರಸ್ತೆ ಬದಿ ಅಂಚಿಗೆ ಬರುವ […]

ವಿದ್ಯುತ್ ತಂತಿ ಮೇಲೆ ಉರುಳಿದ ಮರದ ಗೆಲ್ಲು

ಕುಂದಾಪುರ:ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ಬಡಾಕೆರೆ ಮುಖ್ಯ ರಸ್ತೆ ಬಳಿಯಲ್ಲಿರುವ ಬೃಹತ್ ಗಾತ್ರದ ಅರಳಿ ಮರದ ಗೆಲ್ಲು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಲೈನ್ ತುಂಡಾಗಿದೆ.ಮೈನ್ ಲೈನ್ ಮೇಲೆ ಮರದ ಗೆಲ್ಲು ಬಿದ್ದ ಪರಿಣಾಮ ಗ್ರಾಮ ಜನರಿಗೆ ವಿದ್ಯುತ್ ಕೈ ಕೊಟ್ಟಿದೆ.ಮೆಸ್ಕಾಂ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆ ಮೂಲಕ ಮರದ ಗೆಲ್ಲುಗಳನ್ನು ಸ್ಥಳಾಂತರಿಸಿ,ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿದರು

You cannot copy content of this page